ಮಂಗಳೂರು: ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ನಡೆದಿದೆ.
ವಿಲ್ಸನ್ ಫೆರ್ನಾಂಡಿಸ್ (26), ಮೃತ ಯುವಕ. ವಿಲ್ಸನ್ ಫೆರ್ನಾಂಡಿಸ್ ತೊಕ್ಕೊಟ್ಟು ಕಲ್ಲಾಪುರ ಬಳಿ ಅಂಗಡಿಯೊಂದರ ಸ್ವಿಚ್ ಬೋರ್ಡ್ ದುರಸ್ತಿ ಮಾಡುವಾಗ ಈ ಅವಘಡ ಸಂಭವಿಸಿದೆ.
ಈ ಸಂದರ್ಭದಲ್ಲಿ ವಿಲ್ಸನ್ ಸಹೋದರ, ನೆಲ್ಸನ್ ಫೆರ್ನಾಂಡಿಸ್ಗೂ ವಿದ್ಯುತ್ ಶಾಕ್ ತಗುಲಿದೆ. ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ವಿಲ್ಸನ್ ಫೆರ್ನಾಂಡಿಸ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.