ETV Bharat / state

ಅಪಘಾತದಲ್ಲಿ ಬ್ರೈನ್ ಡೆಡ್ : 32 ವರ್ಷದ ಯುವಕನ‌ ಅಂಗಾಂಗ ದಾನ - ಅಪಘಾತದಲ್ಲಿ ಮಂಗಳೂರು ಯುವಕನ ಬ್ರೈನ್ ಡೆಡ್ ಅಂಗಾಂಗ ದಾನ

ನಿನ್ನೆ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ಘೋಷಣೆ ಮಾಡಿದ ಬಳಿಕ, ಕುಟುಂಬಸ್ಥರು ಸತೀಶ್ ಅವರ ಅಂಗಾಂಗ ದಾನಕ್ಕೆ ನಿರ್ಧರಿಸಿದರು. ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಅಂಗಾಂಗ ದಾನದ ಸಕಲ ಪ್ರಕ್ರಿಯೆಗಳ ಬಳಿಕ, ಅಂಗಾಂಗಗಳನ್ನು ರವಾನೆ ಮಾಡಲಾಯಿತು..

ಯುವಕನ‌ ಅಂಗಾಂಗ ದಾನ
ಯುವಕನ‌ ಅಂಗಾಂಗ ದಾನ
author img

By

Published : Dec 29, 2021, 2:30 PM IST

ಮಂಗಳೂರು : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೋರ್ವನ ಅಂಗಾಂಗ ದಾನ ಮಾಡಲಾಗಿದೆ. ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ ಮಾಡಲಾಗಿದೆ.

32 ವರ್ಷದ ಯುವಕನ‌ ಅಂಗಾಂಗ ದಾನ

ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 32 ವರ್ಷದ ಸತೀಶ್ ಎಂಬುವರು ಬ್ರೈನ್ ಡೆಡ್ ಆದ ಹಿನ್ನೆಲೆಯಲ್ಲಿ ಕುಟುಂಬದವರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಅದರಂತೆ ಅವರ ಹೃದಯ, ಲಿವರ್, ಕಿಡ್ನಿ ದಾನ ಮಾಡಲಾಗಿದೆ.

ಇಂದು ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಹೃದಯವನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ, ಲಿವರ್​ ಅ​ನ್ನು ಬೆಂಗಳೂರಿನ ನಾರಾಯಣ ಹೃದಯಲಾಯ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಸತೀಶ್
ಸತೀಶ್

ಒಂದು ಕಿಡ್ನಿ ಉಡುಪಿ ಮಣಿಪಾಲ್ ಆಸ್ಪತ್ರೆಗೆ, ಮತ್ತೊಂದು ಕಿಡ್ನಿ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ರವಾನೆ ಮಾಡಲಾಯಿತು. ಮಂಗಳೂರು ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆ ಮೂಲಕ ಆ್ಯಂಬುಲೆನ್ಸ್‌ನಲ್ಲಿ ಅಂಗಾಂಗ ಸಾಗಿಸಲು ವ್ಯವಸ್ಥೆ ಮಾಡಿದರು.

ಭಾನುವಾರ ಬಂಟ್ವಾಳ ತಾಲೂಕಿನ ಪುಂಜಲ್ ಕಟ್ಟೆಯಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಅಪಘಾತದಲ್ಲಿ ಯುವಕ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು.

ನಿನ್ನೆ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ಘೋಷಣೆ ಮಾಡಿದ ಬಳಿಕ, ಕುಟುಂಬಸ್ಥರು ಸತೀಶ್ ಅವರ ಅಂಗಾಂಗ ದಾನಕ್ಕೆ ನಿರ್ಧರಿಸಿದರು. ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಅಂಗಾಂಗ ದಾನದ ಸಕಲ ಪ್ರಕ್ರಿಯೆಗಳ ಬಳಿಕ, ಅಂಗಾಂಗಗಳನ್ನು ರವಾನೆ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.