ಮಂಗಳೂರು: ತೋಟದಲ್ಲಿ ಅಡಿಕೆ ಕೀಳಲೆಂದು ಮರವೇರಿದ ಯುವಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಮೂಡಬಿದಿರೆಯ ಬೆಳುವಾಯಿಯಲ್ಲಿ ನಡೆದಿದೆ.
ಮೂಡಬಿದಿರೆಯ ಬೆಳುವಾಯಿ ನಿವಾಸಿ ಕೀರ್ತಿ(30) ಮೃತಪಟ್ಟ ಯುವಕ.
ಕೀರ್ತಿ ಇಂದು ಬೆಳಗ್ಗೆ ತಮ್ಮ ತೋಟದಲ್ಲಿ ಅಡಿಕೆ ಕೀಳಲೆಂದು ಮರವೇರಿದ್ದರು. ಆದರೆ ಈ ಸಂದರ್ಭ ಆಕಸ್ಮಿಕವಾಗಿ ಮರದ ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ. ಪರಿಣಾಮ ಅವರು ಮರದಿಂದ ಕೆಳಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.