ಮಂಗಳೂರು: ನಗರದ ಮಾರ್ಗನ್ಸ್ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಮಾರ್ಗನ್ಸ್ ಗೇಟ್ ಎರಡನೇ ಸೇತುವೆ ಬಳಿ ಸುಮಾರು 30-35 ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪದಲ್ಲೇ ಬ್ಯಾಗ್ ಕೂಡ ಪತ್ತೆಯಾಗಿದ್ದು, ಧರಿಸಿದ್ದ ಪ್ಯಾಂಟಿನ ಜೇಬಿನಲ್ಲಿ ತ್ರಿಶ್ಶೂರಿನ ಬ್ಯಾಂಕೊಂದರಲ್ಲಿ ಹಣ ಪಾವತಿಸಿದ ರಶೀದಿಯೊಂದು ಸಿಕ್ಕಿದೆ.
ಕೇರಳದಿಂದ ಬರುವ ರೈಲಿನಿಂದ ಬಿದ್ದು ಯುವಕ ಮೃತಪಟ್ಟಿರುವ ಸಾಧ್ಯತೆಗಳಿಗೆ ಅಥವಾ ರೈಲು ಹಳಿಯಲ್ಲಿ ನಡೆದುಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಇದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.