ETV Bharat / state

ಬಂಟ್ವಾಳದಲ್ಲಿ ಮತ್ತೆ ಕೊರೊನಾ ಕೇಕೆ: ಸೋಂಕಿಗೆ ಮಹಿಳೆ ಬಲಿ - Bhantvala Corona latest news

ಇಂದು ಬಂಟ್ವಾಳದಲ್ಲಿ ಸೋಂಕಿನಿಂದ  57 ವರ್ಷದ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.

Bhatvala
Bhatvala
author img

By

Published : Jun 28, 2020, 4:31 PM IST

Updated : Jun 28, 2020, 8:17 PM IST

ಬಂಟ್ವಾಳ: ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ಕಸಬಾ ಗ್ರಾಮದ ಬಾರೆಕಾಡು ಸಮೀಪ ಲೊರೊಟ್ಟೊ ಟಿಪ್ಪುನಗರದ 57 ವರ್ಷದ ಮಹಿಳೆ ಕೋವಿಡ್​​-19ನಿಂದ ಮೃತಪಟ್ಟಿದ್ದು, ತಾಲೂಕಿನಲ್ಲಿ ಸಾವಿನ ಸಂಖ್ಯೆ 4ಕ್ಕೇರಿದೆ.

ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ಎರಡು ಮನೆಗಳಲ್ಲಿ ಸರಣಿ ಸಾವು ಸಂಭವಿಸಿದ ಬಳಿಕ ತಾಲೂಕಿನಲ್ಲಿ ಹೊರಜಿಲ್ಲೆ, ರಾಜ್ಯದಿಂದ ಬಂದವರಲ್ಲಿ ಮಾತ್ರ ಪಾಸಿಟಿವ್ ಕೇಸ್ ಕಂಡು ಬಂದಿದ್ದವು. ಆದರೆ ಇದೀಗ ಮತ್ತೆ ಮಹಿಳೆಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ 17 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಸಜೀಪನಡು ಗ್ರಾಮದ 10 ತಿಂಗಳ ಮಗುವಿನದ್ದು ಪ್ರಥಮ ಪ್ರಕರಣವಾಗಿತ್ತು. ಕಸಬಾ ಗ್ರಾಮದಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 9 ಮಂದಿ ಮೂರು ಮನೆಗಳಿಗೆ ಸೇರಿದವರಾಗಿದ್ದರು. ಈ ಪೈಕಿ ಒಂದೇ ಮನೆಯ ಅತ್ತೆ, ಸೊಸೆ ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿದ್ದರು.

ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶೇಷ ತರಬೇತಿ ಪಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಮಹಿಳೆಯ ಅಂತ್ಯಕ್ರಿಯೆ ನಡೆಸಿದರು. ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸೂಚನೆಯಂತೆ ಟಿಪ್ಪುನಗರದಲ್ಲಿನ ಮೃತಳ ಮನೆಯನ್ನು ಸೀಲ್​ಡೌನ್ ಮಾಡಲಾಗಿದೆ.

Last Updated : Jun 28, 2020, 8:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.