ETV Bharat / state

ಆಶ್ರಮದಿಂದ ನಾಪತ್ತೆಯಾಗಿದ್ದ ಮಹಿಳೆ ಹಳೆ ಪ್ರಿಯಕರನ ಜತೆಗೆ ಪತ್ತೆ

ಆಶ್ರಮದಿಂದ ನಾಪತ್ತೆಯಾಗಿದ್ದ ಮಹಿಳೆವೋರ್ವಳು ಹಳೆ ಪ್ರಿಯಕರನ ಜತೆಗೆ ಪತ್ತೆಯಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Woman found in old love home, Woman found in old love home in Dakshina Kannada, Ullala woman abscond case, Ullala woman abscond case news, ಹಳೆ ಪ್ರಿಯಕರ ಮನೆಯಲ್ಲಿ ಮಹಿಳೆ ಪತ್ತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಳೆ ಪ್ರಿಯಕರ ಮನೆಯಲ್ಲಿ ಮಹಿಳೆ ಪತ್ತೆ, ಉಲ್ಲಾಳ ಮಹಿಳೆ ನಾಪತ್ತೆ ಪ್ರಕರಣ, ಉಲ್ಲಾಳ ಮಹಿಳೆ ನಾಪತ್ತೆ ಪ್ರಕರಣ ಸುದ್ದಿ,
ಆಶ್ರಮದಿಂದ ನಾಪತ್ತೆಯಾದ ಮಹಿಳೆ ಹಳೆ ಪ್ರಿಯಕರನ ಜತೆಗೆ ಪತ್ತೆ
author img

By

Published : Nov 13, 2020, 2:29 PM IST

ಉಳ್ಳಾಲ: ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಗಳಿಂದ ಪಜೀರು ಗೋವನಿತಾ ಆಶ್ರಮಕ್ಕೆ ಸೇರಿದ್ದ ವಿಧವೆ ಇತ್ತೀಚೆಗೆ ನಾಪತ್ತೆಯಾಗಿದ್ದಳು. ಈಗ ತನ್ನ ಹಳೆಯ ಪ್ರಿಯಕರನ ಜತೆಗೆ ಉಳ್ಳಾಲದಲ್ಲಿ ಪತ್ತೆಯಾಗಿದ್ದಾಳೆ.

ಅಡ್ಯಾರುಪದವಿನಲ್ಲಿದ್ದ ವಿಧವೆಗೆ ಎರಡು ವರ್ಷಗಳ ಹಿಂದೆ ಉಳ್ಳಾಲದ ವಿವಾಹಿತ ಶೌಕತ್ ಎಂಬಾತನ ಜತೆಗೆ ಪ್ರೇಮವಿತ್ತು. ಒಂದೂವರೆ ವರ್ಷದ ಹಿಂದೆ ಜತೆಯಾಗಿ ವಾಮಂಜೂರಿನಲ್ಲಿದ್ದ ಶೌಕತ್ ಮತ್ತು ಮಹಿಳೆಯನ್ನು ಒಂದೂವರೆ ವರ್ಷದ ಹಿಂದೆ ಹಿಂದೂ ಸಂಘಟನೆಯವರು ಬೇರೆ ಮಾಡಿಸಿ, ಪಜೀರು ಗೋವನಿತಾಶ್ರಮಕ್ಕೆ ಒಪ್ಪಿಸಿದ್ದರು.

ವಿಧವೆ ಆಶ್ರಮದಿಂದಲೇ ಶೌಕತ್ ಸಂಪರ್ಕದಲ್ಲಿದ್ದಳು ಎನ್ನಲಾಗ್ತಿದೆ. ನ.2 ರಂದು ಈಕೆ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಗೋವನಿತಾಶ್ರಮ ಸಮಿತಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಕೊಣಾಜೆ ಠಾಣಾ ಅಪರಾಧ ವಿಭಾಗದ ಎಸ್. ಐ ಶರಣಪ್ಪ ನೇತೃತ್ವದ ತಂಡ ಮತ್ತೆ ಮಹಿಳೆಯನ್ನು ಶೌಕತ್ ಮನೆಯಲ್ಲೇ ಪತ್ತೆಹಚ್ಚಿದ್ದಾರೆ. ಇಬ್ಬರು ವಯಸ್ಕರಾಗಿದ್ದು, ಸ್ವ-ಇಚ್ಛೆಯಿಂದ ತೆರಳಿರುವುದರಿಂದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.