ಸುಬ್ರಹ್ಮಣ್ಯ: ಸುಳ್ಯ ಕ್ಷೇತ್ರದಲ್ಲಿ ಈಗಾಗಲೇ ಶೇ. 50ರಷ್ಟು ಅಭಿವೃದ್ಧಿ ಆಗಿದೆ. ಅದರಂತೆ ಇನ್ನುಳಿದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡಲಾಗುವುದೆಂದು ನೂತನ ಸಚಿವ ಎಸ್. ಅಂಗಾರ ತಿಳಿಸಿದರು.
ಎಸ್. ಅಂಗಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಶುಕ್ರವಾರ ಸ್ವಕ್ಷೇತ್ರ ಸುಳ್ಯಕ್ಕೆ ಭೇಟಿ ನೀಡಿದ್ದು, ಇಂದು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕುಟ್ರುಪಾಡಿ ಗ್ರಾಮದ ಕೇಪು ಎಂಬಲ್ಲಿಗೆ ತೆರಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಂತರ ಕೇಪು ಲಕ್ಷ್ಮೀಜನಾರ್ಧನ, ಪಂಚಮುಖಿ ಆಂಜನೇಯ ಮುಖ್ಯಪ್ರಾಣ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸುದ್ದಿಯನ್ನೂ ಓದಿ: ಜಲಧಾರೆ ಯೋಜನೆ ಮೂಲಕ ಧಾರವಾಡದ ಪ್ರತೀ ಮನೆಗೂ ನೀರು: ಸಚಿವ ಜಗದೀಶ ಶೆಟ್ಟರ್
ಸಚಿವರಾಗಿ ತಾಲೂಕಿನ ವಿವಿಧ ಕಡೆಗಳಿಗೆ ಭೇಟಿ ನೀಡಿದ ಎಸ್. ಅಂಗಾರ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ದಾರಿಯಲ್ಲಿ ಸಿಗುವಂತಹ ನೆಟ್ಟಣ, ಮರ್ಧಾಳ, ಕುಟ್ರುಪಾಡಿ, ಇಚ್ಲಂಪಾಡಿ, ಪೆರಿಯಶಾಂತಿ ಕೊಕ್ಕಡ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಪಕ್ಷದ ಧ್ವಜ ಹಿಡಿದ ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿದರು.