ETV Bharat / state

ಪ್ರಶ್ನಿಸುವ ಧ್ವನಿ ಇಲ್ಲದವರಿಗೆ ಸಂಸದ, ಮಂತ್ರಿ ಸ್ಥಾನ ಯಾಕೆ: ಡಿಕೆಶಿ - kannada news

ದ.ಕ ಜಿಲ್ಲೆಗೆ ನಳಿನ್ ಕುಮಾರ್ ಕೊಡುಗೆ ಏನು? ಸಂಸದರಾಗಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇನು ಎಂದು ಸಚಿವ ಡಿ.ಕೆ.ಶಿವಕುಮಾರ್​ ಪ್ರಶ್ನಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್
author img

By

Published : Apr 15, 2019, 3:16 PM IST

ಮಂಗಳೂರು: ಹತ್ತು ವರ್ಷಗಳಿಂದ ಸಂಸದರಾಗಿದ್ದ ನಳಿನ್ ಕುಮಾರ್ ಜಿಲ್ಲೆಗೆ ಮಾಡಿದ ಅಭಿವೃದ್ಧಿ ಕಾರ್ಯಗಳಾದರೂ ಏನು? ಸಂಸತ್ತಿನಲ್ಲಿ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ, ಆ ಧ್ವನಿಗೆ ಸಿಕ್ಕ ಫಲವಾದ್ರೂ ಏನು ? ದ.ಕ. ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಡಿ.ಕೆ.ಶಿವಕುಮಾರ್

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವಿಜಯ ಬ್ಯಾಂಕ್ ವಿಲೀನದ ಬಗ್ಗೆ ಶೋಭಾ ಕರಂದ್ಲಾಜೆ, ಸದಾನಂದಗೌಡ ಹಾಗೂ ನಳಿನ್ ಕುಮಾರ್ ಕಟೀಲು ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಎತ್ತಿದ್ದರೆ ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದ ವಿಜಯ ಬ್ಯಾಂಕ್ ಕೈ ಬಿಟ್ಟು ಹೋಗುತ್ತಿರಲಿಲ್ಲ. ಆ ಧ್ವನಿಯೇ ಇಲ್ಲ ಅಂದ ಮೇಲೆ ಇನ್ನು ಸಂಸತ್ ಸದಸ್ಯ, ಮಂತ್ರಿ ಸ್ಥಾನ ಉಳಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ಮಂಗಳೂರಿಗೆ ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ಹೆಸರು ಮಾತ್ರ ಇದೆ. ಇನ್ನೂ ಹಣ ಬಂದಿಲ್ಲ. ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅಚ್ಚೇ ದಿನ್​​ ಎಂಬ ಮಾತುಗಳು ಈಗ ನಿಂತುಹೋಗಿವೆ. ಯಾರಿಗೂ ಯಾವ ಅಚ್ಚೇ ದಿನವೂ ಬಂದಿಲ್ಲ.

ಈ‌ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬದಲಾವಣೆ ತರಬೇಕೆಂದು ಒಬ್ಬ ವಿದ್ಯಾವಂತ ಯುವಕನಿಗೆ ಮೈತ್ರಿ ಸರ್ಕಾರ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಆದ್ದರಿಂದ ತಾವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈಯವನ್ನು ಬಹಮತದಿಂದ ಆಯ್ಕೆ ಮಾಡಬೇಕೆಂದು ಡಿಕೆಶಿ ವಿನಂತಿಸಿಕೊಂಡ್ರು.

Intro:ಮಂಗಳೂರು: ನಳಿನ್ ಕುಮಾರ್ ಕಟೀಲು ಅವರು ದ.ಕ.ಜಿಲ್ಲೆಯ ಸಂಸದನಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹತ್ತು ವರ್ಷಗಳಲ್ಲಿ ಅವರ ಸಾಧನೆ ಏನು. ಸಂಸತ್ತಿನಲ್ಲಿ ಎಷ್ಟು ಧ್ವನಿ ಎತ್ತಿದ್ದಾರೆ. ಆ ಧ್ವನಿಗೆ ಎಷ್ಟು ಫಲ ಸಿಕ್ಕಿದೆ. ದ.ಕ.ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವಿಜಯ ಬ್ಯಾಂಕ್ ವಿಲೀನ ವಿಚಾರದಲ್ಲಿ ಶೋಭಾ ಕರಂದ್ಲಾಜೆ, ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲು ಅವರು ಸಂಸತ್ತಿನಲ್ಲಿ ಇದು ಸಾಧ್ಯ ಇಲ್ಲ ಎಂದು ಒಂದು ದಿನವೂ ಧ್ವನಿ ಎತ್ತಿಲ್ಲ. ಇದು ನಮ್ಮ ಸ್ವಾಭಿಮಾನದ ಸಂಕೇತ. ನಮ್ಮ ಬ್ಯಾಂಕನ್ನು ಯಾಕೆ ನಿಮ್ಮ ಬ್ಯಾಂಕ್ ನೊಂದಿಗೆ ವಿಲೀನ ಮಾಡಬೇಕೆಂದು ಪ್ರಶ್ನಿದ್ದರೆ ವಿಲೀನ ಪ್ರಕ್ರಿಯೆ ಆಗುತ್ತಿರಲಿಲ್ಲ. ಆ ಧ್ವನಿಯೇ ಇಲ್ಲ ಅಂದ ಮೇಲೆ ಇನ್ನು‌ ಯಾಕೆ ಸಂಸತ್ ಸದಸ್ಯ, ಮಂತ್ರಿ ಸ್ಥಾನ ಉಳಿಸಿಕೊಂಡಿದ್ದಾರೆ ಎಂದು ಅವರು ವ್ಯಂಗ್ಯ ಮಾಡಿದರು.

Body:ಮಂಗಳೂರಿಗೆ ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಹೆಸರು ಮಾತ್ರ ಇದೆ. ಇನ್ನು ಹಣ ಬಂದಿಲ್ಲ. ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಅಚ್ಛೇ ದಿನ ಎಂಬ ಮಾತುಗಳು ಈಗ ನಿಂತುಹೋಗಿವೆ. ಯಾರಿಗೂ ಯಾವ ಅಚ್ಛೇ ದಿನವೂ ಬಂದಿಲ್ಲ.

ಈ‌ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಬದಲಾವಣೆ ತರಬೇಕೆಂದು ಒಬ್ಬ ವಿದ್ಯಾವಂತ ಯುವಕನಿಗೆ ಮೈತ್ರಿ ಸರಕಾರ ಸಂಸತ್ ಸದಸ್ಯನ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಆದ್ದರಿಂದ ತಾವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈಯವನ್ನು ಬಹಮತದಿಂದ ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.