ಸುಳ್ಯ: ರಾಜ್ಯ ಸಂಪುಟ ದರ್ಜೆಯ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸ್ವಕ್ಷೇತ್ರ ಸುಳ್ಯಕ್ಕೆ ಆಗಮಿಸಿದ ಸಚಿವ ಎಸ್.ಅಂಗಾರರಿಗೆ ಸುಳ್ಯದಲ್ಲಿ ಅದ್ಧೂರಿಯ ಸ್ವಾಗತ ನೀಡಲಾಯಿತು.
ಸುಳ್ಯದ ಜ್ಯೋತಿ ವೃತ್ತದಲ್ಲಿ ನೆರೆದ ನೂರಾರು ಮಂದಿ ಕಾರ್ಯಕರ್ತರು ಸ್ವಾಗತ ನೀಡಿದರು. ಹಾಗೆಯೇ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಾಯಿತು. ಈ ನಡುವೆ ಕಾರ್ಯಕರ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು.
ಪ್ರಭಾಕರ ಭಟ್ ಆಶೀರ್ವಾದ ಪಡೆದ ಸಚಿವರು :
ಎಸ್. ಅಂಗಾರ ಅವರು ಹಿರಿಯ ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಅವರನ್ನು ಭೇಟಿಯಾಗಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಈ ಸಂದರ್ಭ ಸಚಿವರನ್ನು ಸನ್ಮಾನಿಸಲಾಯಿತು.