ETV Bharat / state

ಮೊಬೈಲ್ ಬದಲು ಕೆಟ್ಟುಹೋದ ತಿಂಡಿಯ ಪೊಟ್ಟಣ: ಅದೃಷ್ಟದ ಹೆಸರಿನಲ್ಲಿ ವ್ಯಕ್ತಿಗೆ ಪಂಗನಾಮ - ಉಪ್ಪಿನಂಗಡಿಯಲ್ಲಿ ವ್ಯಕ್ತಿಗೆ ಮೋಸ

ನಕಲಿ ಸಂದೇಶವೊಂದನ್ನು ವ್ಯಕ್ತಿಯೊಬ್ಬರು ನಂಬಿ ಅಂಚೆ ಕಚೇರಿಯಲ್ಲಿ ಹಣ ಕಟ್ಟಿ ಪಾರ್ಸೆಲ್​ ಪಡೆದುಕೊಂಡಾಗ, ಅದರಲ್ಲಿ ಕೆಟ್ಟು ಹೋದ ತಿಂಡಿಯ ಪೊಟ್ಟಣ ಪತ್ತೆಯಾಗಿದೆ. ಲಕ್ಕಿ ಗ್ರಾಹಕರಾಗಿ ಆಯ್ಕೆಯಾಗಿರುವ ನಿಮಗೆ 8,800 ರೂ. ಮುಖಬೆಲೆಯ ಮೊಬೈಲ್‌ ಫೋನ್​ನನ್ನು ಕಳುಹಿಸಲಾಗುವುದು ಎಂದು ಮೆಸೇಜ್​ ಬಂದಿತ್ತು.

wasted foof packet instead of a mobile phone
ಮೊಬೈಲ್ ಬದಲು ಕೆಟ್ಟುಹೋದ ತಿಂಡಿಯ ಪೊಟ್ಟಣ
author img

By

Published : Sep 13, 2022, 4:17 PM IST

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಅದೃಷ್ಟ ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆ 8,800 ರೂ. ಮುಖಬೆಲೆಯ ಮೊಬೈಲ್‌ ಫೋನ್​ನನ್ನು, 1,785 ರೂ.ಗೆ ಕಳುಹಿಸಲಾಗುವುದು ಎಂಬ ಸಂದೇಶ ವ್ಯಕ್ತಿಯೊಬ್ಬರಿಗೆ ಬಂದಿದೆ. ಇದನ್ನು ನಂಬಿ ಅವರು ಅಂಚೆ ಮೂಲಕ ಬಂದ ಪಾರ್ಸೆಲ್‌ ಖರೀದಿಸಿದಾಗ, ಅದರಲ್ಲಿ ಫೋನ್​ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಇತ್ತು. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ದೇಗುಲವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭವಾನಿ ಶಂಕರ್‌ ಎಂಬುವರು ಇತ್ತೀಚೆಗೆ ಮೂರು ವಿವೋ ಕಂಪನಿಯ ಮೊಬೈಲ್‌ ಫೋನ್‌ಗಳನ್ನು ಖರೀದಿಸಿದ್ದರು. ಇದರ ಬಳಿಕ ಅವರ ಮೊಬೈಲ್‌ಗೆ ಕರೆಯೊಂದನ್ನು ಮಾಡಿದ ಸಂಸ್ಥೆಯ ಅಧಿಕಾರಿ ಎನ್ನಲಾದ ವ್ಯಕ್ತಿ ಮೂರು ಮೊಬೈಲ್‌ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆ ನಿಮಗೆ 8,800 ರೂ. ಬೆಲೆಯ ಮೊಬೈಲ್​ ಅನ್ನು ಕೇವಲ 1,785 ರೂ.ಗೆ ಕಳುಹಿಸಲಾಗುವುದು. ಹಣ ನೀಡಿ ಅಂಚೆ ಕಚೇರಿಯಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದರು.

wasted foof packet instead of a mobile phone
ಮೊಬೈಲ್ ಬದಲು ಕೆಟ್ಟುಹೋದ ತಿಂಡಿಯ ಪೊಟ್ಟಣ

ಹೀಗಾಗಿ ಅವರು ತಾವು ಫೋನ್‌ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದು ಸತ್ಯವಿರಬಹುದು ಎಂದು ಹಣ ನೀಡಿ ಪಾರ್ಸೆಲ್​ ತೆಗೆದುಕೊಂಡಿದ್ದಾರೆ. ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್​​ನನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್‌ ಮಾಡಿ ಕಳುಹಿಸಿರುವುದು ಕಂಡು ಬಂದಿದೆ. ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್‌ ಸಂಸ್ಥೆಯ ಹೆಸರಿನಲ್ಲಿ ಭವಾನಿ ಶಂಕರ್ ಅವರನ್ನು ವಂಚಿಸಲಾಗಿದೆ.

ಇದನ್ನೂ ಓದಿ:ಆಸ್ತಿಗಾಗಿ ಸಾಧು ವೇಷದಲ್ಲಿ ಬಂದು ಕುಟುಂಬಕ್ಕೆ ಮೋಸ: 41 ವರ್ಷಗಳ ನಂತರ ಬಂತು ಮಹತ್ವದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.