ಉಳ್ಳಾಲ: ಹರೇಕಳ-ಅಡ್ಯಾರ್ ಸೇತುವೆ ನಿರ್ಮಾಣ ಬಳಿಕ ಕೇಂದ್ರ ಸ್ಥಾನ ಆಗಲಿರುವ ನಾಲ್ಕು ಗ್ರಾಮಗಳ ಸಂಗಮ ಗ್ರಾಮಚಾವಡಿ ಜಂಕ್ಷನ್ಅನ್ನು ಮುಖ್ಯ ರಸ್ತೆಗಳ ಮಾದರಿಯಲ್ಲೇ ಅಭಿವೃದ್ಧಿಪಡಿಸಿ ನಗರ ಸ್ವರೂಪಕ್ಕೆ ತರಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
50 ಲಕ್ಷ ರೂ. ಅನುದಾನದಲ್ಲಿ ಪಜೀರ್-ಹರೇಕಳ ಮುಖ್ಯ ರಸ್ತೆ ಗ್ರಾಮಚಾವಡಿ ಜಂಕ್ಷನ್ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿಗೆ ನಿನ್ನೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ: ರಾಜಕೀಯ ಅಸ್ತಿತ್ವಕ್ಕಾಗಿ ಅಹಿಂದ ಕೂಗು: ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯ
ಗ್ರಾಮೀಣ ಭಾಗದಿಂದ ದೂರದ ನಗರ ಪ್ರದೇಶಕ್ಕೆ ಪ್ರಯಾಣಿಸುವರಿಗೆ ಯಾವುದೇ ಅಡಚಣೆಯಿಲ್ಲದಂತೆ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಇದೀಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎರಡನೇ ಹಂತದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.