ಮಂಗಳೂರು: ನಾಡಿನಾದ್ಯಂತ ಇಂದು ವಿಜಯದಶಮಿಯ ಸಂಭ್ರಮ. ವಿಜಯದಶಮಿಯ ಪ್ರಯುಕ್ತ ಇಂದು ಕರಾವಳಿಯಲ್ಲಿ ಪುಟಾಣಿ ಮಕ್ಕಳಿಗೆ ವಿದ್ಯಾರಂಭ ನಡೆಸಿದರೆ ಮತ್ತೊಂದೆಡೆ ತೆನೆಹಬ್ಬದ ಸಂಭ್ರಮವಿತ್ತು.
ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಇಂದು ನೂರಾರು ಮಕ್ಕಳಿಗೆ ವಿದ್ಯಾರಂಭದ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಪುಟಾಣಿ ಮಕ್ಕಳನ್ನು ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಿದ್ಯಾರಂಭದ ಮೂಲಕ ಶಾರದ ಪೂಜೆ ನಡೆಯಿತು. ಮಕ್ಕಳಿಗೆ ವಿದ್ಯಾರಂಭ ಪೂಜೆಯಲ್ಲಿ ಅಕ್ಕಿಯ ಮೇಲೆ ಓಂ ಮತ್ತು ದೇವರ ಹೆಸರು ಮತ್ತು ಅ ಅಕ್ಷರಗಳನ್ನು ಬರೆಸಿ ಅಕ್ಷರಾಭ್ಯಾಸ ನಡೆಸಲಾಯಿತು.
ಇದೇ ವೇಳೆ, ಮಂಗಳಾದೇವಿ ದೇವಸ್ಥಾನದಲ್ಲಿ ತೆನೆ ಪೂಜೆ ನಡೆಯಿತು. ಪೂಜೆ ಮಾಡಲಾದ ತೆನೆಯನ್ನು ಭಕ್ತರು ಮನೆಗೆ ಕೊಂಡೊಯ್ದು ಹೊಸ ಅಕ್ಕಿಯ ಅಡುಗೆ ಮಾಡಿ ಊಟ ಮಾಡುತ್ತಾರೆ. ಒಟ್ಟಿನಲ್ಲಿ ವಿಜಯದಶಮಿ ಪ್ರಯುಕ್ತ ಮಂಗಳೂರಿನಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆದರೆ ಮಂಗಳೂರಿನ ಹಲವೆಡೆ ಪೂಜೆ ಮಾಡಲಾದ ತೆನೆಯ ಧಾನ್ಯವನ್ನು ಸೇರಿಸಿ ಹೊಸ ಅಕ್ಕಿ ಊಟ ಮಾಡಿ ಹಬ್ಬ ಆಚರಿಸಿದರು.