ETV Bharat / state

ಕತ್ತಿ ಜನರಿಗೆ ರೇಷನ್ ಕಾರ್ಡ್ ತಲುಪಿಸುವ ಕೆಲಸ ಮಾಡಲಿ: ಯು.ಟಿ. ಖಾದರ್ ಆಕ್ರೋಶ - Former Minister UT Khader

ಟಿವಿ, ಬೈಕ್, ಪ್ರಿಡ್ಜ್ ಇದ್ದರೆ ಬಿಪಿಎಲ್ ರದ್ದುಪಡಿಸಲಾಗುವುದೆಂದು ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

UT Khader Outrage aginest Umesh katti
ಯು.ಟಿ ಖಾದರ್ ಆಕ್ರೋಶ
author img

By

Published : Feb 15, 2021, 4:53 PM IST

ಮಂಗಳೂರು: ಉಮೇಶ್​ ಕತ್ತಿ ಮೊದಲು ಜನರಿಗೆ ರೇಷನ್ ಕಾರ್ಡ್ ತಲುಪಿಸುವ ಕೆಲಸ ಮಾಡಲಿ ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಮಾಜಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯು.ಟಿ ಖಾದರ್ ಆಕ್ರೋಶ

ಟಿವಿ,ಬೈಕ್, ಪ್ರಿಡ್ಜ್ ಇದ್ದರೆ ಬಿಪಿಎಲ್ ರದ್ದುಪಡಿಸಲಾಗುವುದೆಂದು ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ವಾಪಸ್​ ಪಡೆಯಬೇಕು. ಇಲ್ಲದಿದ್ದರೆ ಸರ್ಕಾರ ಉಳಿಯುವುದಿಲ್ಲ. ಜನರೇ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರಕ್ಕೆ ಜನಸಾಮಾನ್ಯರ ನಾಡಿಮಿಡಿತ ಗೊತ್ತಿಲ್ಲ. ಮೊಬೈಲ್ ಸಹ ಸೇರಿಸಿದ್ದರೆ ಎಲ್ಲ ಬಿಪಿಎಲ್ ರದ್ದಾಗುತ್ತಿತ್ತು.

ಕಾಂಗ್ರೆಸ್ ಸರ್ಕಾರ ಗರಿಬಿ ಹಠಾವೋ ಮಾಡಿದರೆ ಬಿಜೆಪಿಯವರು ಗರಿಬೋಂಕೋ ಹಠಾವೊ ಮಾಡುತ್ತಿದ್ದಾರೆ. ರಮೇಶ್​ ಜಾರಕಿಹೊಳಿ ಬಿಜೆಪಿ ಸರ್ಕಾರ ಬಹುಮತ ಹೊಂದಿರುವಾಗ ಮತ್ತೆ 5 ಮಂದಿ ಶಾಸಕರನ್ನು ಬಿಜೆಪಿಗೆ ಕರೆತರುವೆ ಎಂದಿದ್ದಾರೆ. ಅವರಿಗೆ ಬಿಜೆಪಿ ಶಾಸಕರ ಬಗ್ಗೆ ಸಂಶಯ ಇದೆಯೆ. ಅಲ್ಲಿ ದುರ್ಬಲವಾದರೆ ಇಲ್ಲಿ ದುರ್ಬಲ ಮಾಡಲು ಪ್ರಯತ್ನಿಸಬಹುದು. ನಮ್ಮಲ್ಲಿ ಯಾರೂ ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.