ETV Bharat / state

ಕಂಬಳ ಓಟದಲ್ಲಿ ಹೊಸ ದಾಖಲೆ ಬರೆದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ - ಶ್ರೀನಿವಾಸ್ ಗೌಡ ದಾಖಲೆ

100ಮೀಟರ್​​ಗೆ ಓಟವನ್ನು 8.96 ಸೆಕೆಂಡ್​​​ನಲ್ಲಿ ಗುರಿ ತಲುಪಿ ಹೊಸ ದಾಖಲೆ ಬರೆದಿದ್ದಾರೆ.

ಕಂಬಳ ಓಟದಲ್ಲಿ ಹೊಸ ದಾಖಲೆ ಬರೆದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ
author img

By

Published : Mar 20, 2021, 5:56 PM IST

Updated : Mar 20, 2021, 7:17 PM IST

ಬೆಳ್ತಂಗಡಿ (ಮಂಗಳೂರು) : ವೇಣೂರಿನ ಪೆರ್ಮುಡದಲ್ಲಿ ನಡೆಯುತ್ತಿರುವ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಮತ್ತೊಂದು ದಾಖಲೆ ಬರೆದಿದ್ದಾರೆ.

ನೇಗಿಲು ಹಿರಿಯ ವಿಭಾಗದಲ್ಲಿ ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು ಶ್ರೀನಿವಾಸ ಗೌಡ 100 ಮೀಟರ್​ ದೂರವನ್ನ ಕೇವಲ 8.96 ಸೆಕೆಂಡ್​ಗಳಲ್ಲಿ ಪೂರೈಸಿ ಹೊಸ ವಿಕ್ರಮ ಬರೆದಿದ್ದಾರೆ. ಈ ಓಟದ ಒಟ್ಟಾರೆ ದೂರು 125 ಮೀಟರ್​​ಗಳು. ಈ ದೂರವನ್ನು ಅವರು ಕೇವಲ 11.21 ಸೆಕೆಂಡ್​​​ನಲ್ಲಿ ಓಡಿಸಿ ಗುರಿ ಮುಟ್ಟಿದ್ದಾರೆ. ಇದನ್ನು 100ಮೀಟರ್​​ಗೆ ಲೆಕ್ಕಹಾಕಿದಾಗ 8.96 ಸೆಕೆಂಡ್​​​ನಲ್ಲಿ ಗುರಿ ತಲುಪಿದ್ದು ಅಂಕಿ- ಸಂಖ್ಯೆಗಳಿಂದ ದೃಢಪಟ್ಟಿದೆ. ಈ ಮೂಲಕ ಅವರು ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.

2020ರಲ್ಲಿ ಶ್ರೀನಿವಾಸ ಗೌಡ ಅವರು 9.55 ಸೆಕೆಂಡ್​ನಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಬಳಿಕ ಅಕ್ಕೇರಿ ಸುರೇಶ್ ಶೆಟ್ಟಿ, ಇರ್ವತ್ತೂರು ಆನಂದ ಈ ದಾಖಲೆಗಳನ್ನು ಕ್ರಮವಾಗಿ ಮುರಿದಿದ್ದರು. ಇತ್ತೀಚೆಗೆ ನಡೆದ ಮಂಗಳೂರು ಕಂಬಳದಲ್ಲಿ ಬಜಗೋಳಿ ನಿಶಾಂತ್ ಶೆಟ್ಟಿ 9.19 ಸೆಕೆಂಡ್ ನಲ್ಲಿ ದಾಖಲೆ ಮಾಡಿದ್ದರು. ಇದೀಗ ಮತ್ತೆ ಮಿಜಾರು ಶ್ರೀನಿವಾಸ ಗೌಡ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ.

ಇದನ್ನೂ ಓದಿ: ಮೆಕ್ಕಾದಲ್ಲಿ ಮಂಗಳೂರು ಮೂಲದ ವೈದ್ಯ ಎ.ಕೆ.ಖಾಸಿಂ ನಿಧನ

Last Updated : Mar 20, 2021, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.