ಮಂಗಳೂರು: ಲಾಕ್ಡೌನ್ ಹಿನ್ನೆಲೆ ವಿದೇಶದಲ್ಲಿ ಸಿಲುಕಿರುವವರನ್ನು ರಕ್ಷಿಸಿ ಮರಳಿ ಭಾರತಕ್ಕೆ ಕರೆತರುವ ಕಾರ್ಯ ಮತ್ತೆ ಮುಂದುವರೆದಿದ್ದು, ಶಾರ್ಜಾ ಹಾಗೂ ದಮಾಮ್ನಿಂದ ಅನಿವಾಸಿ ಕನ್ನಡಿಗರನ್ನು ಹೊತ್ತು ತಂದಿರುವ ಎರಡು ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಸೌದಿ ಅರೇಬಿಯಾದ ದಮಾಮ್ನಿಂದ ಹೊರಟ ಚಾರ್ಟರ್ಡ್ ವಿಮಾನ ಇಂಡಿಗೋ ಶನಿವಾರ ಮಧ್ಯಾಹ್ನ ಮಂಗಳೂರು ತಲುಪಿದ್ದು, ಇದರಲ್ಲಿ 178 ಪ್ರಯಾಣಿಕರು ಆಗಮಿಸಿದ್ದಾರೆ.
ವಂದೇ ಭಾರತ್ ಮಿಷನ್ ಯೋಜನೆಯಡಿ ಯುಎಇ ಶಾರ್ಜಾದಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ನಿನ್ನೆ ರಾತ್ರಿ ಸುಮಾರು 7.30ಕ್ಕೆ ಮಂಗಳೂರು ತಲುಪಿದೆ. ಈ ವಿಮಾನದಲ್ಲಿ 168 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಇವರೆಲ್ಲರನ್ನೂ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.