ETV Bharat / state

ಮಂಗಳೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ​​: ಆರೋಪಿ ನ್ಯಾಯವಾದಿಯ ಪತ್ನಿ ಸಹಿತ ಮತ್ತೋರ್ವನ ಬಂಧನ, ಜಾಮೀನು - ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್ ಪ್ರಕರಣ

ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್ ಕಾನೂನು ವಿದ್ಯಾರ್ಥಿನಿಗೆ ತನ್ನ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಅ.18ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಬಳಿಕದಿಂದ ಆರೋಪಿ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದಾನೆ.

sexual-harassment-case
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
author img

By

Published : Dec 9, 2021, 11:45 PM IST

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಆರೋಪಿ ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್​​ಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಆತನ ಪತ್ನಿ ಹಾಗೂ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ಭಟ್​​ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿ ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್ ಕಾನೂನು ವಿದ್ಯಾರ್ಥಿನಿಗೆ ತನ್ನ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಅ.18ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕದಿಂದ ಆರೋಪಿ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದಾನೆ. ಇದೀಗ ಆತನಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಪತ್ನಿ ಹಾಗೂ ಅಲೋಕ್ ಭಟ್​ನನ್ನು ಪೊಲೀಸರು ಬಂಧಿಸಿದ್ದಾರೆ.

sexual harassment case
ಆರೋಪಿ ನ್ಯಾಯವಾದಿ ಕೆಎಸ್ಎನ್ ರಾಜೇಶ್ ಭಟ್

ಈ ಹಿಂದೆ ಆರೋಪಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಅನಂತ ಭಟ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಮಧ್ಯೆ ಮತ್ತೋರ್ವ ಆರೋಪಿ ಅಚ್ಯುತ ಭಟ್ ಹಾಗೂ ಆತನ ಪುತ್ರ ಅಲೋಕ್ ಎಂಬಾತ ಕೂಡ ಆರೋಪಿ ರಾಜೇಶ್ ಭಟ್‌ಗೆ ಸಹಕಾರ ನೀಡುತ್ತಿದ್ದರು ಎಂದು ತಿಳಿದುಬಂದಿತ್ತು.

ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಇಂದು ಅಚ್ಯುತ ಭಟ್‌ನ ಮಗ ಆಲೋಕ್ ಮತ್ತು ರಾಜೇಶ್ ಭಟ್‌ನ ಪತ್ನಿಯನ್ನು ಕೂಡ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವೀರಪುತ್ರರ ದುರಂತ ಸಾವು: ಪಾರ್ಥಿವ ಶರೀರದ ಅಂತಿಮ ದರ್ಶನ, ಕುಟುಂಬಸ್ಥರಿಗೆ ನಮೋ ಸಾಂತ್ವನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.