ಬೆಳ್ತಂಗಡಿ: ತಾಲೂಕಿನ ಮದ್ದಡ್ಕ ಗ್ರಾಮದ ಲಾಡಿ ಎಂಬಲ್ಲಿ ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದ ಮೃತಪಟ್ಟಿದ್ದಾರೆ.
ಸ್ಥಳೀಯ ನಿವಾಸಿ ಅಬ್ಬಾಸ್ ಎಂಬುವರ ಮಕ್ಕಳಾದ ಸಫಾನ್ (8) ಹಾಗೂ ಸಿನಾನ್ (4) ಮೃತರು. ಇವರಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯವಾಗಿ ಚಿಕಿತ್ಸೆ ಪಡೆದು ಮನೆಯಲ್ಲಿಯೇ ಇದ್ದರು. ಈ ನಡುವೆ ಇಬ್ಬರು ಮಕ್ಕಳಿಗೂ ಮತ್ತೆ ಜ್ವರ ಬಾಧಿಸಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಓರ್ವ ನಿನ್ನೆ ಮೃತಪಟ್ಟಿದ್ದು, ಇನ್ನೋರ್ವ ಇಂದು (ಮಂಗಳವಾರ) ಮೃತಪಟ್ಟಿದ್ದಾನೆ. ಮನೆಯ ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಚಾಮರಾಜನಗರ: ಪ್ರತ್ಯೇಕ ಪ್ರಕರಣದಲ್ಲಿ ಮೂವರು ಸಾವು, ನಾಲ್ವರಿಗೆ ಗಾಯ