ETV Bharat / state

ವಿಶಿಷ್ಟವಾಗಿ ನಮೋ ಹುಟ್ಟುಹಬ್ಬ ಆಚರಣೆ: ಮಂಗಳೂರಿನಲ್ಲಿ‌ 85 ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ

ಪ್ರಧಾನಿ‌ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಮತ್ತು ಗ್ರೂಪ್ ಡಿ ನೌಕರರಿಗೆ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿಯಿರುವ ವೈಶ್ಯ ಪ್ರತಿಷ್ಠಾನದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ನಮೋ ಹುಟ್ಟುಹಬ್ಬ ಆಚರಣೆ: ಮಂಗಳೂರಿನಲ್ಲಿ‌ 85 ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ
author img

By

Published : Sep 20, 2019, 1:42 AM IST

ಮಂಗಳೂರು: ಪ್ರಧಾನಿ ಮೋದಿ ಸೆ.18ರಂದು ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿಯಿರುವ ವೈಶ್ಯ ಪ್ರತಿಷ್ಠಾನದಲ್ಲಿ 85 ಮಹಿಳಾ ಹಾಗೂ ಪುರುಷ ಪೌರ ಕಾರ್ಮಿಕರು, ಗ್ರೂಪ್ ಡಿ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಮಂಗಳೂರಿನಲ್ಲಿ‌ 85 ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ

ಪ್ರಧಾನಿ ಮೋದಿಯವರಿಗೆ ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಬಹಳಷ್ಟು ಉಡುಗೊರೆಗಳು ದೇಶ ವಿದೇಶಗಳಿಂದ ದೊರೆತಿವೆ. ಅವುಗಳನ್ನು‌ ಮಾರಿ ದೊರೆತ ₹300 ಕೋಟಿಯನ್ನು ಗುಜರಾತಿನ ಎಸ್ಸಿ-ಎಸ್ಟಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿರಿಸಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದೇವದರ್ ಗೌರವ ಸಮರ್ಪಣೆಯ ಬಳಿಕ ಮಾತನಾಡುತ್ತಾ ಹೇಳಿದ್ದಾರೆ.

ನರೇಂದ್ರ ಮೋದಿಯವರಿಗೆ ಅವರ ತಂದೆ ತಾಯಿಯಿಂದ ಸ್ವಾರ್ಥ ರಹಿತ ಸೇವೆ ಮೈಗೂಡಿದೆ. ಮೊದಲಾಗಿ ಅವರ ತಾಯಿಯಿಂದ ಬಡ ಜನರ ಸಂಕಷ್ಟಗಳ ಬಗ್ಗೆ ಅರಿವು ಮೂಡಿದೆ. ಆದ್ದರಿಂದಲೇ ಅವರು ಮನೆಯ ಕಷ್ಟ ತೀರಲು ತಂದೆಯ ಅಂಗಡಿಯಿಂದ ದೂರದ ರೈಲ್ವೇ ನಿಲ್ದಾಣಕ್ಕೆ ಹೋಗಿ ಚಹಾ ಮಾರಿದರು ಎಂದು ಸುನೀಲ್ ದೇವದರ್ ಹೇಳಿದರು.

ಕಾರ್ಯಕ್ರಮದ ಮೊದಲಿಗೆ ಸುನೀಲ್ ದೇವದರ್ ಅವರು ಹೊನ್ನಮ್ಮ ಎಂಬ ಪೌರ ಕಾರ್ಮಿಕೆಯೊಬ್ಬರ ಪಾದ ಪೂಜೆ ಮಾಡಿದರು. ಈ ಸಂದರ್ಭ ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಕ್ಯಾ.ಬ್ರಿಜೇಶ್ ಚೌಟ, ಪ್ರಭಾ ಮಾಲಿನಿ, ರವಿಶಂಕರ್ ಮಿಜಾರ್ ಮತ್ತಿತರರು ಉಪಸ್ಥಿತರಿದ್ದರು.

Intro:ಮಂಗಳೂರು: ಪ್ರಧಾನಿ ಮೋದಿಯವರಿಗೆ ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಬಹಳಷ್ಟು ಉಡುಗೊರೆಗಳು ದೇಶ ವಿದೇಶಗಳಿಂದ ದೊರೆತಿವೆ. ಇಂದು ಅವುಗಳನ್ನು‌ ಮಾರಿ ದೊರೆತ 300 ಕೋಟಿ ರೂ.ವನ್ನು ಗುಜರಾತಿನ ಎಸ್ಸಿ-ಎಸ್ಟಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿರಿಸಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದೇವದರ್ ಹೇಳಿದರು‌.

ಪ್ರಧಾನಿ‌ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಮತ್ತು ಗ್ರೂಪ್ ಡಿ ನೌಕರರಿಗೆ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿಯಿರುವ ವೈಶ್ಯ ಪ್ರತಿಷ್ಠಾನದಲ್ಲಿ ನಡೆದ ಗೌರವ ಸಮರ್ಪಣೆ ಕಾರ್ಮಕ್ರಮದಲ್ಲಿ‌ ಭಾಗವಹಿಸಿ ಅವರು ಮಾತನಾಡಿ, ವಿದೇಶಗಳಲ್ಲಿ ನರೇಂದ್ರ ಮೋದಿಯವರಿಗೆ ಸನ್ಮಾನಗಳು, ಉಡುಗೊರೆಗಳು ದೊರೆತಾಗ ಅವರು ಹೇಳುವ ಮಾತು ಇದು ನನಗೆ ದೊರೆತ ಪುರಸ್ಕಾರವಲ್ಲ. ನನ್ನ ದೇಶದ 130 ಕೋಟಿ ಜನತೆಗೆ ಸಿಕ್ಕಿದ ಪುರಸ್ಕಾರ ಎಂದು ಹೇಳುವುದು ಅವರ ಔದಾರ್ಯತೆ ಎಂದು ಹೇಳಿದರು.

Body:ನರೇಂದ್ರ ಮೋದಿಯವರಿಗೆ ಅವರ ತಂದೆ ತಾಯಿಯಿಂದ ಸ್ವಾರ್ಥ ರಹಿತ ಸೇವೆ ಅವರಲ್ಲಿ ಮೈಗೂಡಿದೆ. ಮೊದಲಾಗಿ ಅವರ ತಾಯಿಯಿಂದ ಬಡ ಜನರ ಸಂಕಷ್ಟಗಳ ಬಗ್ಗೆ ಅರಿವು ಮೂಡಿದೆ. ಆದ್ದರಿಂದಲೇ ಅವರು ಮನೆಯ ಕಷ್ಟ ತೀರಲು ತಂದೆಯ ಅಂಗಡಿಯಿಂದ ದೂರದ ರೈಲ್ವೇ ನಿಲ್ದಾಣಕ್ಕೆ ಹೋಗಿ ಚಹಾ ಮಾರಿದರು ಎಂದು ಸುನೀಲ್ ದೇವದರ್ ಹೇಳಿದರು.

ಈ ಸಂದರ್ಭ ಅವರು ಮಂಗಳೂರಿನ 85 ಮಹಿಳಾ ಹಾಗೂ ಪುರುಷ ಪೌರ ಕಾರ್ಮಿಕರು, ಗ್ರೂಪ್ ಡಿ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಾಡಿದರು. ಕಾರ್ಯಕ್ರಮದ ಮೊದಲಿಗೆ ಸುನೀಲ್ ದೇವದರ್ ಅವರು ಹೊನ್ನಮ್ಮ ಎಂಬ ಪೌರ ಕಾರ್ಮಿಕೆಯೊಬ್ಬರ ಪಾದ ಪೂಜೆ ಮಾಡಿದರು.

ಈ ಸಂದರ್ಭ ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಕ್ಯಾ.ಬ್ರಿಜೇಶ್ ಚೌಟ, ಪ್ರಭಾ ಮಾಲಿನಿ, ರವಿಶಂಕರ್ ಮಿಜಾರ್ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.