ETV Bharat / state

ಕರಾವಳಿಯಲ್ಲಿ ವರುಣಾರ್ಭಟ: ಕಡಬದಲ್ಲಿ ಜೀಪ್, ಅಂಗಡಿ ಮೇಲೆ ಬಿದ್ದ ಮರ - ದಕ್ಷಿಣ ಕನ್ನಡ ಮಳೆ ಸುದ್ದಿ

ಕರಾವಳಿ ಭಾಗದಲ್ಲಿ ಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಮಳೆಗೆ ಬೃಹತ್​ ಮರವೊಂದು ಟೂರಿಸ್ಟ್ ಜೀಪ್ ಮೇಲೆ ಬಿದ್ದು, ಜೀಪ್​ ನಜ್ಜುಗುಜ್ಜಾಗಿದೆ.

Tree Falling On  zeep in kadapa
ಟೀ ಅಂಗಡಿ ಮೇಲೆ ಬಿದ್ದ ಮರ
author img

By

Published : Jul 15, 2021, 5:12 PM IST

ಕಡಬ(ದಕ್ಷಿಣ ಕನ್ನಡ): ಕಡಬ ತಾಲೂಕಿನ ಕೊಂಬಾರು ನಿವಾಸಿ ಕಿರಣ್ ಎಂಬುವವರಿಗೆ ಸೇರಿದ ಟೂರಿಸ್ಟ್ ಜೀಪ್ ಮೇಲೆ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ.

Tree Falling On  zeep in kadapa
ಜೀಪ್​ ಮೇಲೆ ಬಿದ್ದ ಮರ

ಈ ಘಟನೆ ವೇಳೆ ಜೀಪ್​ನಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೀಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇನ್ನೊಂದು ಘಟನೆಯಲ್ಲಿ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ದಿವ್ಯ ಎಂಬವರ ಟೀ ಅಂಗಡಿ ಕಟ್ಟಡದ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು ಅಂಗಡಿ ಶೀಟುಗಳು ಹಾನಿಗೀಡಾಗಿವೆ.

Tree Falling On  zeep in kadapa
ಟೀ ಅಂಗಡಿ ಮೇಲೆ ಬಿದ್ದ ಮರ

ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಧಾರಾ, ನೇತ್ರಾವತಿ, ಗುಂಡ್ಯ, ಪಯಸ್ವಿನಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ತೀರದ ಕೃಷಿ ಭೂಮಿಗಳಿಗೆ ಹಲವು ಕಡೆಗಳಲ್ಲಿ ನೀರು ನುಗ್ಗಿದ ಬಗ್ಗೆ ಸಹ ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.