ಸುಳ್ಯ/ಮಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪಶ್ಚಿಮ ವಲಯದ ಹಲವು ಸಬ್ ಇನ್ಸ್ಪೆಕ್ಟರ್ಗಳನ್ನು ವಿವಿಧೆಡೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಉಪ್ಪಿನಂಗಡಿ ಠಾಣಾ ಎಸ್ಐ ನಂದಕುಮಾರ್ ಅವರನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಬೆಳ್ಳಾರೆ ಠಾಣಾ ಎಸ್ಐ ಈರಯ್ಯ ಅವರನ್ನು ಉಪ್ಪಿನಂಗಡಿ ಠಾಣೆಗೆ ನೇಮಿಸಲಾಗಿದೆ. ಧರ್ಮಸ್ಥಳ ಠಾಣಾ ಎಸ್ಐ ಅವಿನಾಶ್ರವರನ್ನು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆ, ಪುತ್ತೂರು ನಗರ ಠಾಣಾ ಎಸ್ಐ ಚೆಲುವಯ್ಯರವರನ್ನು ಪುತ್ತೂರು ಸಂಚಾರ ಠಾಣೆಗೆ ವರ್ಗ ಮತ್ತು ವಿಟ್ಲ ಠಾಣಾ ಎಸ್ಐ ಯಲ್ಲಪ್ಪ ಅವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಠಾಣೆಗೆ ವರ್ಗಾಯಿಸಲಾಗಿದೆ.
ಒಟ್ಟು 47 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿ ಆದೇಶಿಸಲಾಗಿದ್ದು, ವರ್ಗಾವಣೆಗೊಂಡ ಸ್ಥಳಗಳಲ್ಲಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.