ಮಂಗಳೂರು: ಒಂದು ಸರ್ಕಾರಿ ಬಸ್ ಸಹಿತ 15ಕ್ಕೂ ಅಧಿಕ ಖಾಸಗಿ ಬಸ್ಗಳ ಮೇಲೆ ಶಬ್ದ ಮಾಲಿನ್ಯದ ಪ್ರಕರಣ ದಾಖಲಿಸಿದ್ದು, ಬಸ್ ಚಾಲನೆ ವೇಳೆ ಮೊಬೈಲ್ ಬಳಸಿದ ಆರೋಪದಲ್ಲಿ ಖಾಸಗಿ ಬಸ್ ಚಾಲಕನೋರ್ವನಿಗೆ ದಂಡ ವಿಧಿಸಲಾಗಿದೆ.
ನಗರದ ಆರ್ಟಿಒ ಬಳಿ ಇಂದು ಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಸುಮಾರು 70 ಕ್ಕೂ ಅಧಿಕ ಬಸ್ಗಳನ್ನು ತಪಾಸಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ಕಶ ಶಬ್ದಗಳಿಂದ ಶಬ್ದ ಮಾಲಿನ್ಯವನ್ನು ಉಂಟುಮಾಡುವ ಬಸ್ಗಳ ಹಾರ್ನ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ:
ಬಸ್ ಚಾಲಕ ಸಂದೇಶ್ ನಾಯ್ಕ್ ಎಂಬಾತ ಕಾರ್ಕಳದಿಂದ ಮಂಗಳೂರಿಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ಈ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದರೂ ಬೇಜವಾಬ್ದಾರಿತನದ ಉತ್ತರ ನೀಡಿದ್ದನಂತೆ. ಇದು ಮಂಗಳೂರು ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಚಾಲಕನ ವಿರುದ್ಧ ಕ್ರಮ ಕೈಗೊಂಡು 1,100 ರೂ. ದಂಡವನ್ನು ಮಂಗಳೂರು ಸಂಚಾರ ವಿಭಾಗದ ಎಸಿಪಿಯವರು ವಿಧಿಸಿದ್ದಾರೆ.