ಮಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಸ್ಥಗಿತಗೊಂಡಿದ್ದ ಅನ್ನಪ್ರಸಾದ ಇಂದಿನಿಂದ ಮತ್ತೆ ಆರಂಭಗೊಂಡಿದೆ.
ಲಾಕ್ ಡೌನ್ ಬಳಿಕ ಅನ್ನಪ್ರಸಾದ ಆರಂಭವಾದ ಮೊದಲ ದಿನವಾದ ಇಂದು ಮೂರು ಸಾವಿರಕ್ಕೂ ಹೆಚ್ಚಿನ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿದೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಪಂಕ್ತಿ ಊಟವನ್ನು ಮಾಡದೆ ಬಫೆ ವ್ಯವಸ್ಥೆಯ ಮೂಲಕ ಹಾಳೆಯ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ.
3 ಸಾವಿರಕ್ಕೂ ಹೆಚ್ಚು ಹೂವಿನ ಪೂಜೆ, 1,500 ರಷ್ಟು ಕುಂಕುಮಾರ್ಚನೆ ಸೇವೆಗಳು ನಡೆದಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಸೇವೆಗಳು ಮಾತ್ರ ನಡೆದಿವೆ.
