ETV Bharat / state

5 ಕೋಟಿ ಅನುದಾನದಲ್ಲಿ ತಣ್ಣೀರುಬಾವಿ ಕಡಲತೀರ ಅಭಿವೃದ್ಧಿ : ಶಾಸಕ ಡಾ.ವೈ ಭರತ್ ಶೆಟ್ಟಿ

author img

By

Published : Aug 30, 2020, 5:14 PM IST

Updated : Aug 30, 2020, 5:43 PM IST

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮೂಲಕ 5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು..

ತಣ್ಣೀರುಬಾವಿ ಕಡಲತೀರಕ್ಕೆ ಭೇಟಿ ನೀಡಿದ ಶಾಸಕ
ತಣ್ಣೀರುಬಾವಿ ಕಡಲತೀರಕ್ಕೆ ಭೇಟಿ ನೀಡಿದ ಶಾಸಕ

ಮಂಗಳೂರು : ತಣ್ಣೀರುಬಾವಿ ಕಡಲತೀರವನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರೊಂದಿಗೆ ತಣ್ಣೀರುಬಾವಿ ಕಡಲತೀರದಲ್ಲಿ ಅಭಿವೃದ್ಧಿ ಆಗಲಿರುವ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅನೇಕ ಬೀಚ್​ಗಳಲ್ಲಿ ತಣ್ಣೀರುಬಾವಿ ಕಡಲ ತೀರಕ್ಕೆ ತನ್ನದೇ ಆದ ಆಕರ್ಷಣೆ ಇದೆ.

ತಣ್ಣೀರುಬಾವಿ ಕಡಲತೀರಕ್ಕೆ ಭೇಟಿ ನೀಡಿದ ಶಾಸಕ

ಈ ಬೀಚನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ರಾಜ್ಯ, ದೇಶದ ಪ್ರವಾಸಿಗರನ್ನು ಆಕರ್ಷಿಸಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ವಿವರವಾದ ಯೋಜನಾ ವರದಿ ತಯಾರಿಸಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ತಣ್ಣೀರುಬಾವಿಗೆ ಭೇಟಿ ನೀಡಿದ್ದೇನೆ. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮೂಲಕ 5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು. ಈ ವೇಳೆ ಮನಪ ಸದಸ್ಯೆಯರಾದ ಸುಮಿತ್ರಾ ಕರಿಯ, ಸುನೀತಾ, ಅಧಿಕಾರಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.

Last Updated : Aug 30, 2020, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.