ಮಂಗಳೂರು/ ದಕ್ಷಿಣ ಕನ್ನಡ: ನಿಜಾಮುದ್ದೀನ್ ತಬ್ಲಿಘಿ ಜಮಾತ್‌ಗೆ ಹೋದ ಇಬ್ಬರು ಸೇರಿದಂತೆ ದ.ಕ. ಜಿಲ್ಲೆಯ ಮೂರು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12 ಕ್ಕೇರಿದೆ.
ಕೊರೊನಾ ವೈರಸ್ ದೃಢಪಟ್ಟ ಮೂವರು ಕ್ರಮವಾಗಿ ಬಂಟ್ವಾಳ ತಾಲೂಕಿನ ತುಂಬೆ, ಮಂಗಳೂರು ತಾಲೂಕಿನ ಉಳ್ಳಾಲ ಮತ್ತು ಉಡುಪಿ ಜಿಲ್ಲೆಯ ನಿವಾಸಿಯಾಗಳಾಗಿದ್ದಾರೆ.
ಸೋಂಕು ದೃಢಪಟ್ಟ ಬಂಟ್ವಾಳ ತಾಲೂಕಿನ ತುಂಬೆ ಮತ್ತು ಮಂಗಳೂರು ತಾಲೂಕಿನ ಉಳ್ಳಾಲದ ನಿವಾಸಿಗಳು ಮಾರ್ಚ್ 13 ರಿಂದ 18 ವರೆಗೆ ನವದೆಹಲಿಯಲ್ಲಿ ನಡೆದ ಟಿ.ಜೆ. ಕಾಂಗ್ರೆಸ್‌ನಲ್ಲಿ ಭಾಗವಹಿಸಿದ್ದರು ಎಂದು ರಾಜ್ಯ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ನಮೂದಿಸಲಾಗಿದೆ.
ಇನ್ನೋರ್ವ ಕೊರೊನಾ ಸೋಂಕಿಗೊಳಗಾದವರು ಉಡುಪಿ ಜಿಲ್ಲೆಯ 63 ವರ್ಷದ ಮಹಿಳೆಯಾಗಿದ್ದು ಇವರು ದುಬೈನಿಂದ ಮಾ.22 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಮಂಗಳೂರು ಇಎಸ್ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ತಬ್ಲಿಘಿ ಜಮಾತ್‌ಗೆ ತೆರಳಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ವಾಸವಿದ್ದ ತುಂಬೆ ಮತ್ತು ಉಳ್ಳಾಲದ ನಿವಾಸದ ಸುತ್ತ ಕ್ವಾರಂಟೈನ್ ಮಾಡಲಾಗಿದೆ.