ETV Bharat / state

ಬಸ್​​ಗಳಿಗೆ ಕಲ್ಲು ತೂರಾಟ ಪ್ರಕರಣ: ಮೂವರ ಬಂಧನ - ಕಲ್ಲು ತೂರಾಟ

ಬಂಟ್ವಾಳ ಮತ್ತು ಪುತ್ತೂರು ಠಾಣೆಗಳ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್​ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಸ್​​ಗಳಿಗೆ ಕಲ್ಲು ತೂರಾಟ ಪ್ರಕರಣ : ಮೂವರು ಆರೋಪಿಗಳ ದಸ್ತಗಿರಿ
author img

By

Published : Jun 27, 2019, 4:45 AM IST

ಮಂಗಳೂರು : ಬಂಟ್ವಾಳ ಮತ್ತು ಪುತ್ತೂರು ಠಾಣೆಗಳ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳಿಗೆ ದುಷ್ಕರ್ಮಿಗಳು
ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಡಿ ಮನೆ, ಕುಳ ಗ್ರಾಮದ ಪುನೀತ್‌ (20), ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಂಗಳಪದವಿನ ಗುರುಪ್ರಸಾದ್‌ ‌(20), ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರಾದ ಕಿರಣ್‌ರಾಜ್‌ (24) ಬಂಧಿತ ಆರೋಪಿಗಳು.

ಏನಿದು ಪ್ರಕರಣ?

ಜೂನ್ 24 ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣಾ ವ್ಯಾಪ್ತಿಯ ಎಣ್ಮಕಜೆ ಎಂಬಲ್ಲಿ ದನ ಸಾಗಾಟ ಮಾಡುವುದನ್ನು ತಡೆದು ಗಲಾಟ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲ್ಲೆ ನಡೆಸಿರುವ ಅಕ್ಷಯ್‌ ರಜಪೂತ್‌ ಮತ್ತು ಆತನ ಸಂಗಡಿಗರ ಮೇಲೆ ದರೋಡೆ ಪ್ರಕರಣ ದಾಖಲಾಗಿತ್ತು. ಇದರಿಂದ ಆಕ್ರೋಶಗೊಂಡ ಈತನ ಗುಂಪು ವಿಟ್ಲದಲ್ಲಿ ಬಂದ್‌‌ ನಡೆಸುವ ನೆಪದಲ್ಲಿ ಶಾಂತಿ ಭಂಗ ಮಾಡಲು ಸಂಚು ಮಾಡಿತ್ತು. ಈ ವೇಳೆ ಬಸ್​​ಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಸ್​​ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆಯಲ್ಲಿ ಇಬ್ಬರು ಚಾಲಕರು ಮತ್ತು ಮೂರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು ಎಂದು ಹೇಳಲಾಗಿದೆ .

Intro:ಮಂಗಳೂರು: ಬಂಟ್ವಾಳ ಮತ್ತು ಪುತ್ತೂರು ಠಾಣೆಗಳ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಗಳಿಗೆ ದುಷ್ಕರ್ಮಿಗಳು
ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಕಾರ್ಯಾಡಿ ಮನೆ, ಕುಳ ಗ್ರಾಮದ ಪುನೀತ್‌ (20),
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಂಗಳಪದವಿನ ಗುರುಪ್ರಸಾದ್‌ ‌(20), ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರಾ ಎಂಬಲ್ಲಿನ
ಕಿರಣ್‌ರಾಜ್‌ (24) ದಸ್ತಗಿರಿಗೊಂಡ ಆರೋಪಿಗಳು.

Body:ಪ್ರಕರಣಗಳಲ್ಲಿ ಇವರ ಇನ್ನೂ ಹಲವು ಆರೋಪಿಗಳನ್ನು ಬಂಧಿಸುವ ಬಗ್ಗೆ ತನಿಖಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆಯಲ್ಲಿ ಇಬ್ಬರು ಚಾಲಕರು ಮತ್ತು ಮೂರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿತ್ತು. ಜೂನ್ 24 ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣಾ ವ್ಯಾಪ್ತಿಯ ಎಣ್ಮಕಜೆ ಎಂಬಲ್ಲಿ ದನ ಸಾಗಾಟ ಮಾಡುವುದನ್ನು ತಡೆದು ಹಲ್ಲೆ ನಡೆಸಿರುವ ಅಕ್ಷಯ್‌ ರಜಪೂತ್‌ ಮತ್ತು ಆತನ ಸಂಗಡಿಗರ ಮೇಲೆ ದರೋಡೆ ಪ್ರಕರಣ ದಾಖಲಾಗಿದ್ದು, ಇದರಿಂದ ಆಕ್ರೋಶಗೊಂಡ ಈತನ ಗುಂಪು ವಿಟ್ಲದಲ್ಲಿ ಬಂದ್‌‌ ನಡೆಸುವ ನೆಪದಲ್ಲಿ ಶಾಂತಿ ಭಂಗ ಮಾಡಲು ಸಂಚು ಮಾಡಿತ್ತು. ಪರಿಣಾಮವಾಗಿ ಈ ಕೃತ್ಯ ನಡೆಸಿರುವುದಾಗು ತನಿಖೆಯಿಂದ ತಿಳಿದುಬಂದಿದೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.