ಮಂಗಳೂರು: ಸಿಎಎ ಪರ ಪ್ರತಿಭಟನೆ ವೇಳೆ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಘೋಷಣೆ ಕೂಗಿ ತಲೆ ಕಡಿಯುವ ಬೆದರಿಕೆಯೊಡ್ಡಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಸಿಎಎ ಪರ ಸಮಾವೇಶಕ್ಕೆ ಬಂದಿದ್ದ ಯುವಕರ ತಂಡವೊಂದು ಯು.ಟಿ. ಖಾದರ್ ವಿರುದ್ಧ ಘೋಷಣೆ ಕೂಗಿ ಯು.ಟಿ. ಖಾದರ್ ತಲೆ ಕಡಿಯುವ, ಕೈ-ಕಾಲು ತೆಗೆಯುವ ಬೆದರಿಕೆ ಘೋಷಣೆ ಕೂಗಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಂಗಳೂರಿನ ಸಿಎಎ ಪರ ಸಭೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ಗೆ ಬೆದರಿಕೆ: ವಿಡಿಯೋ ವೈರಲ್
ನಿನ್ನೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ. ಖಾದರ್, ಅವರ ವಿರುದ್ಧ ದೂರು ಸಲ್ಲಿಸಿದರೆ ಅವರ ತಂದೆ-ತಾಯಿ ಮಕ್ಕಳನ್ನು ಜೈಲಿನಿಂದ ಬಿಡಿಸಲು ಸಂಕಷ್ಟ ಪಡಬೇಕಾಗುತ್ತದೆ. ಅದಕ್ಕಾಗಿ ದೂರು ಸಲ್ಲಿಸುವುದಿಲ್ಲ ಎಂದಿದ್ದರು.
ತಲೆ ತೆಗೆಯುತ್ತೇವೆ ಎಂದವರ ಬಗ್ಗೆ ಕನಿಕರ ವ್ಯಕ್ತಪಡಿಸಿದ ಮಾಜಿ ಸಚಿವ ಯು.ಟಿ. ಖಾದರ್
ಇಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸುಮೊಟೋ ಪ್ರಕರಣ ದಾಖಲಿಸಬೇಕೆಂದು ಕಮಿಷನರ್ ಅವರಿಗೆ ಆಗ್ರಹಿಸಿದ್ದರು. ಈ ಹಿನ್ನೆಲೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಲಾಗಿದೆ.