ETV Bharat / state

ಕುಕ್ಕೆಗೂ ಕಾಲಿಟ್ಟ ಗೋಕಳ್ಳರು: ಐಷಾರಾಮಿ ಕಾರಿನಲ್ಲಿ ಬಂದು ಕಳ್ಳತನಕ್ಕೆ ಯತ್ನ - ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ಕುಕ್ಕೆ ಸುಬ್ರಹ್ಮಣ್ಯದ ಪಾರ್ಕಿಂಗ್ ಜಾಗದಲ್ಲಿ ಜಾನುವಾರು ಕಳ್ಳತನ ಯತ್ನ ನಡೆದಿದೆ. ದೇವಸ್ಥಾನದ ಪಾರ್ಕಿಂಗ್ ಜಾಗದ ಆಂಜನೇಯ ಗುಡಿಯ ಹಿಂಭಾಗದಲ್ಲಿ ಕೃತ್ಯ ನಡೆದಿದ್ದು, ಇದು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

kukke subramanya
ಐಷಾರಾಮಿ ಕಾರಿನಲ್ಲಿ ಬಂದು ಗೋವು ಕಳ್ಳತನಕ್ಕೆ ಯತ್ನ
author img

By

Published : Mar 26, 2022, 1:11 PM IST

ಸುಬ್ರಹ್ಮಣ್ಯ: ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರ ತಂಡವೊಂದು ಗೋವು ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ದೇಶದ ಪ್ರಸಿದ್ಧ ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ನಸುಕಿನ ಜಾವ ಇನ್ನೋವಾ ಕಾರಿನಲ್ಲಿ ಗೋವು ತುಂಬಿಸಿಕೊಂಡು ಕದ್ದೊಯ್ಯಲು ಖದೀಮರು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪಾರ್ಕಿಂಗ್ ಜಾಗದ ಸಮೀಪವಿರುವ ಆಂಜನೇಯ ಗುಡಿ ಬಳಿ ನಿಂತಿದ್ದ ಬಸ್​ವೊಂದರ ಪಕ್ಕ ಮಲಗಿದ್ದ ಗೋವು ಹಿಡಿದು ಇನ್ನೋವಾ ಕಾರಿನಲ್ಲಿ ತುಂಬಿಸಸಲು ಕಳ್ಳರು ಯತ್ನಿಸಿದ್ದಾರೆ. ಈ ಘಟನೆ ಕಳೆದ 23ರ ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದಿದೆ. ಮಾರ್ಚ್ 25 ರಂದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.

ಐಷಾರಾಮಿ ಕಾರಿನಲ್ಲಿ ಬಂದು ಗೋವು ಕಳ್ಳತನಕ್ಕೆ ಯತ್ನ

ರಸ್ತೆಯಲ್ಲಿ ಸಾಗುತ್ತಿದ್ದ ಗೋಕಳ್ಳರು ಮಲಗಿರುವ ದನವನ್ನು ಕಂಡು ಇನ್ನೋವಾ ಕಾರನ್ನು ರಿವರ್ಸ್ ತೆಗೆದು ಗೋವಿನ ಹತ್ತಿರ ತಂದು ನಿಲ್ಲಿಸಿದ್ದಾರೆ. ಇಬ್ಬರು ಕಾರಿನಿಂದ ಇಳಿದು ಮಲಗಿದ್ದ ಹಸುವಿಗೆ ಏನೋ ಆಹಾರ ಹಾಕಿ ಹಿಡಿಯಲು ಶತಪ್ರಯತ್ನ ಪಟ್ಟಿದ್ದಾರೆ. ಆದರೆ, ಹಸು ಕಟುಕರ ಕೈಯಿಂದ ತಪ್ಪಿಸಿಕೊಂಡು ಹೋಗಿದೆ. ರಾಜ್ಯದ ಅತಿ ಶ್ರೀಮಂತ ದೇವಸ್ಥಾನದಲ್ಲೇ ಈ ರೀತಿ ಗೋವು ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವುದು ಇಲ್ಲಿನ ಭದ್ರತಾ ವೈಫಲ್ಯದ ಕುರಿತು ಸಾರ್ವಜನಕರಲ್ಲಿ ಅನುಮಾನ ಮೂಡಿಸಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್​ ಸ್ಕೂಟರ್​ನಲ್ಲಿ ಬೆಂಕಿ, ಮಲಗಿದ್ದ ತಂದೆ-ಮಗಳು ಉಸಿರುಗಟ್ಟಿ ಸಾವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.