ETV Bharat / state

ಮಂಗಳೂರು ನಗರದ ಖಾಸಗಿ ಸಾರಿಗೆ ಬಸ್​ಗಳಲ್ಲಿ ಬಾಗಿಲೇ ಇಲ್ಲ: ಅಪಾಯಕಾರಿ ಓಡಾಟಕ್ಕೆ ಕಡಿವಾಣ ಏಕಿಲ್ಲ?

author img

By ETV Bharat Karnataka Team

Published : Aug 31, 2023, 9:49 PM IST

Updated : Aug 31, 2023, 10:59 PM IST

ಮಂಗಳೂರು ನಗರದಲ್ಲಿ ಖಾಸಗಿ ಬಸ್​ಗಳು ಬಾಗಿಲೇ ಇಲ್ಲದೆ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗಲಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ಮಂಗಳೂರು ನಗರದಲ್ಲಿ ಸಾರಿಗೆ ಬಸ್
ಮಂಗಳೂರು ನಗರದಲ್ಲಿ ಸಾರಿಗೆ ಬಸ್

ಮಂಗಳೂರು : ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ‌ ಖಾಸಗಿ ಬಸ್​ಗಳು ಪ್ರಾಬಲ್ಯ ಹೊಂದಿವೆ. ಕೆಎಸ್‌ಆರ್​ಟಿಸಿ ಬಸ್​ಗಳು ವಿರಳವಾಗಿರುವ ಈ ಜಿಲ್ಲೆಗಳಲ್ಲಿ ಖಾಸಗಿ‌ ಬಸ್​ಗಳ ಓಡಾಟವೇ ಜಾಸ್ತಿ. ಆದರೆ ಈ ಖಾಸಗಿ ಬಸ್​ಗಳು ನಿಯಮ ಮೀರಿ ಸಂಚರಿಸಿ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಘಟನೆ 1: ಸಂಚಾರದಲ್ಲಿದ್ದ ನಗರ ಸಾರಿಗೆ ಬಸ್​ನಿಂದ ಕಂಡಕ್ಟರ್ ಹೊರಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟಿರುವ ಘಟನೆ ನಗರದ ನಂತೂರಿನಲ್ಲಿ ಮಂಗಳವಾರ ನಡೆದಿತ್ತು. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿರುವ, ಪ್ರಸ್ತುತ ಸುರತ್ಕಲ್ ತಡಂಬೈಲ್​ನಲ್ಲಿ ವಾಸ್ತವ್ಯವಿರುವ ಈರಯ್ಯ (23) ಎಂಬ ಕಂಡಕ್ಟರ್ ಮೃತಪಟ್ಟಿದ್ದರು. ಇವರು 15 ನಂಬರ್​ನ ಖಾಸಗಿ ಸಿಟಿ ಬಸ್ ನಿರ್ವಾಹಕರಾಗಿದ್ದರು. ಬಸ್ಸಿನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ 2: ನಗರದ ಸ್ಟೇಟ್ ಬ್ಯಾಂಕ್-ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಚಾಲಕ ಚಾಲನೆಯ ವೇಳೆ ಮೊಬೈಲ್ ಉಪಯೋಗಿಸುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದರು. 42 ನಂಬರಿನ ಸೈಂಟ್ ಆ್ಯಂಟನಿ ಬಸ್ ಚಾಲಕ ನಿರ್ಲಕ್ಷ್ಯನ ಪ್ರದರ್ಶಿಸಿ ಮೊಬೈಲ್ ಉಪಯೋಗಿಸುತ್ತಾ ಬಸ್ ಚಲಾಯಿಸಿದ್ದಾರೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟುವರೆಗೂ ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೇಜವಾಬ್ದಾರಿಯುತವಾಗಿ ಬಸ್ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಮಂಗಳೂರು ನಗರ ಪೊಲೀಸರು ತಪ್ಪಿತಸ್ಥ ಚಾಲಕನ ಡಿಎಲ್ ರದ್ದುಗೊಳಿಸಲು ಆರ್‌ಟಿಒಗೆ ಸೂಚನೆ ನೀಡಿದ್ದಾರೆ.

ಘಟನೆ 3: ಪಾದಚಾರಿ ಮಹಿಳೆಯೊಬ್ಬರು ಬಸ್ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಕುರಿತಾದ ವಿಡಿಯೋ ವೈರಲ್ ಆಗಿತ್ತು. ಮಹಿಳೆ ಪಕ್ಕದಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಎದುರಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಡ್ರೈವರ್ ಕೂಡಲೇ ಎಡಕ್ಕೆ ಬಸ್‌ ತಿರುಗಿಸಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ, ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ‌ನಗರ ಪೊಲೀಸರು ಬಸ್ ಚಾಲಕ ಮತ್ತು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆ 4: ಮೂಡುಬಿದಿರೆ ತಾಲೂಕಿನ ವಿದ್ಯಾಗಿರಿ ಎಂಬಲ್ಲಿ ಬಸ್ ಹತ್ತುವ ವೇಳೆ ಬಸ್​ ಸಂಚರಿಸಿದ ಪರಿಣಾಮ ವಿದ್ಯಾರ್ಥಿನಿ ಬಸ್​ನಿಂದ ಬಿದ್ದ ಘಟನೆ 2022 ಜೂನ್ 30ರಂದು ನಡೆದಿತ್ತು. ಪರಿಣಾಮ ಆಕೆ ಬಸ್​ನ ಹಿಂಬದಿಗೆ ಚಕ್ರಕ್ಕೆ ಬಿದ್ದು ಕೂದಲೆಳೆ ಅಂತರದಲ್ಲಿ ಸಾವಿನ ಮನೆಯ ಕದ ತಟ್ಟಿ ವಾಪಸ್ ಬಂದಿದ್ದಳು. ಕಾಲೇಜು ಮುಗಿಸಿ ಮರಳಿ ಮನೆಗೆ ಬರುವ ವೇಳೆ ದುರ್ಘಟನೆ ಸಂಭವಿಸಿತ್ತು. ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿನಿ, ಬಸ್​ ಬಂದಿದೆ ಎಂದು ಹತ್ತಲು ಹೋಗಿದ್ದಾಳೆ‌. ಆಕೆ ಬಸ್​ನ ಮೆಟ್ಟಿಲಿನಲ್ಲಿರುವಾಗಲೇ ಬಸ್​ ಚಲಿಸಿದೆ. ಅಷ್ಟಾಗುವಾಗ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ಹಿಂಬದಿಯ ಚಕ್ರದಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಳೆು.

ಖಾಸಗಿ ಸಿಟಿ ಬಸ್​ನಲ್ಲಿ ನಿಯಮಗಳ ಉಲ್ಲಂಘನೆ ಬಗ್ಗೆ ಆರೋಪಗಳು ಸಾಲುಸಾಲಾಗಿ ಕೇಳಿಬರುತ್ತಿವೆ. ಅದರಲ್ಲಿಯೂ ಮಂಗಳವಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್​ನ ಬಾಗಿಲಿನ ಬಗ್ಗೆ ಚರ್ಚೆಗಳಾಗುತ್ತಿವೆ. ಮಂಗಳೂರಿನಲ್ಲಿ ಸಂಚರಿಸುತ್ತಿರುವ ಖಾಸಗಿ ಸಿಟಿ ಬಸ್, ಖಾಸಗಿ ಎಕ್ಸ್‌ಪ್ರೆಸ್‌ ಬಸ್​ಗಳಲ್ಲಿ ಬಾಗಿಲು ತೆರೆದೇ ಇರುವುದು ಅಪಾಯಕಾರಿಯಾಗಿ ಪರಿಣಮಿಸಿದೆ.

ಮುಂಜಾನೆ ಮತ್ತು ಸಂಜೆಯ ಹೊತ್ತಿನಲ್ಲಿ ಕೆಲವೊಂದು ರೂಟ್​ಗಳಲ್ಲಿ ಬಸ್​ನಲ್ಲಿ ನೇತಾಡಿಕೊಂಡೇ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ, ಸಾರ್ವಜನಿಕರ ಜೀವ ಅಪಾಯಕ್ಕೆ ತಳ್ಳುವಂತಾಗಿದೆ. ಮಂಗಳವಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಖಾಸಗಿ ಬಸ್​ಗಳು ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸಬೇಕೆಂದು ಆದೇಶಿಸಿದ್ದಾರೆ. ಇದರ ಜೊತೆಗೆ ಕಂಡಕ್ಟರ್ ಸೇರಿದಂತೆ ಯಾರೂ ಫುಟ್‌ಬೋರ್ಡ್‌ನಲ್ಲಿ ಇರಬಾರದು ಎಂದು ಸೂಚಿಸಿದ್ದಾರೆ.

ಪೊಲೀಸ್ ಕಮೀಷನರ್ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲದೀಪ್ ಕುಮಾರ್ ಜೈನ್, "ಖಾಸಗಿ ಬಸ್‌ಗಳಲ್ಲಿ ಬಾಗಿಲು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಆರ್​ಟಿಓ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದರು.

ಸಿಟಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರು ಹೇಳಿದ್ದೇನು?: ಖಾಸಗಿ ಸಿಟಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಮಾತನಾಡಿ, "ಬಸ್​ಗಳಲ್ಲಿ ಡೋರ್ ಹಾಕಲು ಕಮೀಷನರ್ ಸೂಚನೆ ನೀಡಿದ್ದಾರೆ. ಆದರೆ ಈಗ ಇರುವ ಬಸ್​ನ ಸ್ವರೂಪದಲ್ಲಿ ಇದನ್ನು ಮಾಡಲು ಕಷ್ಟ. ಆದರೆ ಕೇಂದ್ರ ಸರ್ಕಾರ ಹೊಸ ನಿಯಮದ ಪ್ರಕಾರ, ಬಸ್ ಕೋಡ್ ತಂದಿದೆ. ಆ ನಿಯಮದ ಪ್ರಕಾರ ಬಸ್​ನಲ್ಲಿ ಸುರಕ್ಷತೆ ಇದೆ. ಅದನ್ನು ಹೊಸ ಬಸ್​ಗಳಲ್ಲಿ ಫಾಲೋ ಮಾಡಬಹುದು. ಇದನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಪ್ರಯಾಣಿಕರ ಸುರಕ್ಷತೆ ಮಾಡಬಹುದು" ಎಂದರು.

ಇದನ್ನೂ ಓದಿ: ಮಂಗಳೂರು: ಸಂಚರಿಸುತ್ತಿದ್ದ ಬಸ್​ನಿಂದ ಹೊರಗೆ ಬಿದ್ದು ಕಂಡಕ್ಟರ್ ಸಾವು​- ಘಟನೆಯ ವಿಡಿಯೋ ವೈರಲ್​

Last Updated : Aug 31, 2023, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.