ETV Bharat / state

ಈ ಗ್ರಾ.ಪಂ.ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಯಾವುದೇ ಖರ್ಚು-ವೆಚ್ಚ ಇಲ್ಲ : ಕಾರಣ?

ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯಿತಿ​ನಲ್ಲಿ ಚುನಾವಣೆಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರಿಗೆ ನಾಮಪತ್ರ ಸಲ್ಲಿಕೆ, ಕರಪತ್ರ ಪ್ರಿಂಟಿಂಗ್ ಸೇರಿದಂತೆ ಅಂದಾಜು ರೂಪಾಯಿ 2,300 ಖರ್ಚು ಬೀಳುತ್ತದೆ. ಈ ಹಣವನ್ನು ಪಾವತಿಸುವುದು ಇವರನ್ನು ಕಣಕ್ಕೆ ಇಳಿಸಿದ ಇವರ ವಾರ್ಡಿನ ಜನರೇ ಎಂಬುದು ವಿಶೇಷವಾಗಿದೆ.

sulya
ಪಂಜ ಗ್ರಾಮ ಪಂಚಾಯತ್​
author img

By

Published : Dec 24, 2020, 1:39 PM IST

ಸುಳ್ಯ(ದಕ್ಷಿಣ ಕನ್ನಡ): ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಹಣ, ಹೆಂಡದ ಹೊಳೆಯನ್ನೇ ಹರಿಸುವವರಿದ್ದಾರೆ. ಆದ್ರೆ ತಾಲೂಕಿನ ಪಂಜ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಐವರು ಅಭ್ಯರ್ಥಿಗಳು ಮಾತ್ರ ಒಂದು ರೂಪಾಯಿ ಕೂಡ ಖರ್ಚು ಮಾಡುವುದಿಲ್ಲ.

ಐವತ್ತೊಕ್ಲು, ಕೂತ್ಕುಂಜ ವಾರ್ಡ್​ನಿಂದ ಐವರು ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಐವತ್ತೊಕ್ಲು, ಕೂತ್ಕುಂಜ ವಾರ್ಡ್​ನಿಂದ ಐವರು ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇವರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಖರ್ಚು ವೆಚ್ಚಗಳು ಇಲ್ಲ. ಇವರಿಗೆ ನಾಮಪತ್ರ ಸಲ್ಲಿಕೆ, ಕರಪತ್ರ ಪ್ರಿಂಟಿಂಗ್ ಸೇರಿದಂತೆ ಅಂದಾಜು ರೂಪಾಯಿ 2,300 ಖರ್ಚು ಬೀಳುತ್ತದೆ. ಈ ಹಣವನ್ನು ಪಾವತಿಸುವುದು ಇವರನ್ನು ಕಣಕ್ಕಿಳಿಸುವ ವಾರ್ಡಿನ ಜನರೇ ಎಂಬುದು ವಿಶೇಷವಾಗಿದೆ.

ಈ ಅಭ್ಯರ್ಥಿಗಳಿಂದ ಸಾಕ್ಷರತಾ ಸ್ವರಾಜ್ಯ ಸಂಕಲ್ಪದೊಂದಿಗೆ ಪಂಚತಂತ್ರ ಚುನಾವಣಾ ಕಾರ್ಯತಂತ್ರವನ್ನು ಇಲ್ಲಿ ಅಳವಡಿಸಲಾಗಿದೆ. ಇಲ್ಲಿ ಬ್ಯಾನರ್ ಅಳವಡಿಕೆ ಇಲ್ಲ. ವಾಹನ ಪ್ರಚಾರ, ವಿವಿಧ ಆಮಿಷಗಳ ಮೂಲಕ ಮತದಾರರ ಮನವೊಲಿಸುವ ತಂತ್ರಗಳೂ ಇಲ್ಲ. ಅಭ್ಯರ್ಥಿಗಳು ಸರಳ ರೀತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾನ ಮಾಡುವಂತೆ ವಿನಂತಿ ಮಾಡುತ್ತಾರೆ ಅಷ್ಟೇ.

ಓದಿ: ರಾಜ್ಯಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ: ಜನರು ಹೇಳುವುದೇನು?

ಅಭ್ಯರ್ಥಿಗಳ ಇನ್ನೊಂದು ವಿಶೇಷ ಅಂದ್ರೆ ಇವರಿಗೆ ಚುನಾವಣೆಯಲ್ಲಿ ಸೋಲು ಗೆಲುವು ಪ್ರಮುಖವಲ್ಲ. ಸೋತರೂ ಸಾರ್ವಜನಿಕರ ಕೆಲಸಗಳನ್ನು ಮಾಡಿಸಿಕೊಡಲು ಜನರ ಜೊತೆಗಿರುತ್ತಾರೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಪಂಚಾಯಿತಿಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ವಿಳಂಬ ಮಾಡುವ ಅಧ್ಯಕ್ಷರನ್ನಾದರೂ ಅಧಿಕಾರದಿಂದ ಕೆಳಗಡೆ ಇಳಿಸುತ್ತೇವೆ ಎಂಬ ಎಚ್ಚರಿಕೆಯನ್ನು ಇವರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.