ಮಂಗಳೂರು: ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನೆಡೆ ನಿರ್ಲಕ್ಷ್ಯ ಇರುತಂಹ ಪ್ರಕರಣಗಳು ದೇಶದ ಹಲವೆಡೆ ವರದಿಯಾಗುತ್ತಿದೆ. ಈ ಕಾರಣದಿಂದ ನವಜಾತ ಹೆಣ್ಣು ಶಿಶುಗಳನ್ನು ಎಲ್ಲಾದರೂ ಬಿಟ್ಟು ಹೋಗುವಂತಹ ಘಟನೆಗಳು ನಡೆಯುತ್ತದೆ. ಆದರೆ ದಕ್ಷಿಣ ಕನ್ನಡದಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗಿಲ್ಲ ಎನ್ನುವುದೇ ಖುಷಿಯ ವಿಚಾರ.
ಹೆಣ್ಣು ಶಿಶುಗಳ ಬಗ್ಗೆ ವಿವಿಧ ನೆಪಗಳನ್ನಿಟ್ಟುಕೊಂಡು ಹೆಣ್ಣು ಶಿಶುಗಳನ್ನು ತ್ಯಜಿಸುವ ನಿರ್ಧಾರಕ್ಕೆ ಕೆಲವು ಪೋಷಕರು ಬರುತ್ತಾರೆ. ಈ ಕಾರಣದಿಂದ ಪೊದೆಗಳಲ್ಲಿ, ಪಾಳು ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುಗಳು ಪತ್ತೆಯಾಗುತ್ತಿರುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗಿಲ್ಲ.
ಹೆಣ್ಣು ಮಕ್ಕಳ ಪೋಷಣೆ, ಖರ್ಚಿನ ಭಯ, ಗಂಡು ಮಕ್ಕಳ ವ್ಯಾಮೋಹಕ್ಕೆ ಹೆಣ್ಣು ಶಿಶುಗಳನ್ನು ತ್ಯಜಿಸುವ ಮನೋಭಾವ ಕೆಲವರಲ್ಲಿ ಇರುತ್ತದೆ. ಈ ಕಾರಣದಿಂದ ಹೆಣ್ಣು ಶಿಶುಗಳನ್ನು ಎಲ್ಲಾದರೂ ಬಿಟ್ಟು ಹೋಗುವಂತಹ ಪರಿಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿಲ್ಲ.
ಒಟ್ಟಿನಲ್ಲಿ ಹೆಣ್ಣು ಶಿಶುಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಹ, ಎಲ್ಲಾದರೂ ಬಿಸಾಡಿ ಹೋಗುವಂತಹ ಕ್ರೂರ ಮನಸ್ಥಿತಿ ಜಿಲ್ಲೆಯಲ್ಲಿ ಇಲ್ಲವೆಂದೇ ಹೇಳಬಹುದು.