ETV Bharat / state

ಮಂಗಳೂರಿನ ಎರಡು ಕಡೆ ವೀರ ಸಾವರ್ಕರ್ ನಾಮಕರಣದ ಅನಧಿಕೃತ ಬ್ಯಾನರ್ ಪತ್ತೆ

author img

By

Published : Aug 17, 2021, 1:42 PM IST

ಪಂಪ್‌ವೆಲ್‌ ಮೇಲ್ಸೇತುವೆ ಮತ್ತು ಕಂಕನಾಡಿ ರೈಲ್ವೆ ನಿಲ್ದಾಣದ ನಾಮಫಲಕದ ಬಳಿ "ವೀರ ಸಾವರ್ಕರ್ ಮೇಲ್ಸೇತುವೆ ಪಂಪ್‌ವೆಲ್" ಮತ್ತು "ವೀರ ಸಾವರ್ಕರ್ ರೈಲು ನಿಲ್ದಾಣ ಮಂಗಳೂರು" ಎಂಬ ಬ್ಯಾನರ್ ಹಾಕಿರುವುದು ಪತ್ತೆಯಾಗಿದೆ.

mangalore
ಸಾವರ್ಕರ್ ನಾಮಕರಣದ ಅನಧಿಕೃತ ಬ್ಯಾನರ್

ಮಂಗಳೂರು: ಪುತ್ತೂರಿನ ಕಬಕದಲ್ಲಿ ಸಾವರ್ಕರ್ ಫೋಟೋ ಇರುವ ಸ್ವಾತಂತ್ರ್ಯ ರಥಕ್ಕೆ ಎಸ್​ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ ಬಳಿಕ ಮಂಗಳೂರು ನಗರದ ಎರಡು ಕಡೆಗಳಲ್ಲಿ ವೀರ ಸಾವರ್ಕರ್ ಹೆಸರಿನಲ್ಲಿ ಅನಧಿಕೃತ ಬ್ಯಾನರ್ ಅಳವಡಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪಂಪ್‌ವೆಲ್‌ ಮೇಲ್ಸೇತುವೆ ಮತ್ತು ಕಂಕನಾಡಿ ರೈಲ್ವೆ ನಿಲ್ದಾಣದ ನಾಮಫಲಕದ ಬಳಿ ಈ ಬ್ಯಾನರ್​ಗಳು ಕೆಲ ಹೊತ್ತು ಕಾಣಿಸಿಕೊಂಡಿದ್ದವು. ಪಂಪ್‌ವೆಲ್‌ ಮೇಲೆ "ವೀರ ಸಾವರ್ಕರ್ ಮೇಲ್ಸೇತುವೆ ಪಂಪ್‌ವೆಲ್" ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಬಳಿ "ವೀರ ಸಾವರ್ಕರ್ ರೈಲು ನಿಲ್ದಾಣ ಮಂಗಳೂರು" ಎಂಬ ಬ್ಯಾನರ್ ಹಾಕಲಾಗಿತ್ತು.

ಈ ಎರಡು ಬ್ಯಾನರ್​ಅ​ನ್ನು ಕೆಲಹೊತ್ತಿನ ಬಳಿಕ ಅಪರಿಚಿತರು ತೆರವುಗೊಳಿಸಿದ್ದಾರೆ. ವರ್ಷಗಳ ಹಿಂದೆ ಪಂಪ್‌ವೆಲ್‌ ಮೇಲ್ಸೇತುವೆಯ ಮೇಲೆ ಇದೇ ರೀತಿಯ ಬ್ಯಾನರ್ ಕಾಣಿಸಿಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.