ETV Bharat / state

ಹಿರಿಯರ ಅನುಭವದ ಮುಂದೆ ಉನ್ನತ ಶಿಕ್ಷಣವೂ ವ್ಯರ್ಥ: ಯು.ಟಿ.ಖಾದರ್ - ಉಳ್ಳಾಲ ಟಿಪ್ಪು ಸುಲ್ತಾನ್ ಮಹಾವೇದಿಕೆ

ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯಿಂದ ಮುನ್ನೂರು ಗ್ರಾಮದ ಸುಭಾಷ್ ನಗರದಲ್ಲಿ  ನವೀಕರಣಗೊಂಡ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

U t khadar
U t khadar
author img

By

Published : Aug 7, 2020, 1:05 PM IST

ಉಳ್ಳಾಲ: ಸಮಾಜದಲ್ಲಿರುವ ಸಂಘಟನೆಗಳು ಜನರಿಗೆ ಉಪಕಾರ ಮಾಡುವ ಜೊತೆಗೆ ಪರಸ್ಪರ ಪ್ರೀತಿ ಮೂಡಿಸುವ ಉದ್ದೇಶ ಹೊಂದಿರಬೇಕು ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯಿಂದ ಮುನ್ನೂರು ಗ್ರಾಮದ ಸುಭಾಷ್ ನಗರದಲ್ಲಿ ನವೀಕರಿಸಲ್ಪಟ್ಟ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಹಿರಿಯರಿಗೆ ವಿದ್ಯಾಭ್ಯಾಸ ಕಡಿಮೆ ಇರಬಹುದು, ಆದರೆ, ಅವರ ಅನುಭವದ ಮುಂದೆ ಉನ್ನತ ಶಿಕ್ಷಣವೂ ವ್ಯರ್ಥ. ಸಂಘಟನೆಗಳು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪತ್ರಕರ್ತ ಹಂಝ ಮಲಾರ್, ಅನ್ಸಾರ್ ಇನೋಳಿ ಹಾಗೂ ಅಫ್ರೀಜ್​​​ ಸಜಿಪ ರನ್ನು ಸನ್ಮಾನಿಸಲಾಯಿತು.

ಈ ವೇಳೆ ಟಿಪ್ಪು ಸುಲ್ತಾನ್ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಆಲ್ವಿನ್ ಡಿಸೋಜಾ, ಝಕರಿಯಾ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.