ಮಂಗಳೂರು: ರಾಷ್ಟ್ರೀಯ ಮತದಾರರ ಪಟ್ಟಿಗೆ ಮಿಂಚಿನ ನೋಂದಣಿಯಲ್ಲಿ 18,728 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಜ.6ರಿಂದ 10ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಿಂದ ಸುಲಭವಾಗಿ ಹೊಸ, ಯುವ ಮತದಾರರು ಸೇರ್ಪಡೆಗೊಂಡರು ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ 59,792 ನಮೂನೆಗಳು ಸ್ವೀಕೃತವಾಗಿವೆ. ಜಿಲ್ಲೆಯ ಒಟ್ಟು ಪುರುಷ ಮತದಾರರು 8,44,955 ಇದೆ. ಮಹಿಳಾ ಮತದಾರರು 8,78,933. ಉಳಿದ ಮತದಾರರು 72 ಮಂದಿ ಇದ್ದಾರೆ ಒಟ್ಟಾರೆಯಾಗಿ ಲಿಂಗಾನುಪಾತ 1040 ಇದೆ ಎಂದು ತಿಳಿಸಿದರು.
ಜನವರಿ 25ರಂದು ಪ್ರತಿಯೊಂದು ತಾಲೂಕು ಹಂತದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗಿತ್ತು. ಈ ಸಂದರ್ಭ ಎಲ್ಲಾ ಕಾಲೇಜುಗಳಲ್ಲಿ ಮತದಾರತ ದಿನಾಚರಣೆ ಆಚರಿಸಲು ನಿರ್ದೇಶನ ನೀಡಲಾಗಿತ್ತು ಎಂದರು.