ETV Bharat / state

ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕರೆಸಿ ದೋಸೆ ಮಾಡಿಸಿದರೆ ಜನ ಮತ ಹಾಕಲ್ಲ: ಅಣ್ಣಾಮಲೈ ವ್ಯಂಗ್ಯ - ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಸೂರ್ಯ

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಇಂದು ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದರು.

tamil-nadu-bjp-state-president-k-annamalai-press-conference-in-putturu
ರಾಜ್ಯಕ್ಕೆ ಪ್ರಿಯಾಂಕ ಗಾಂಧಿಯವರನ್ನು ಕರೆಸಿ ದೋಸೆ ಮಾಡಿಸಿದರೆ ಜನ ಮತ ಹಾಕಲ್ಲ: ಅಣ್ಣಾಮಲೈ ವ್ಯಂಗ್ಯ
author img

By

Published : Apr 29, 2023, 3:25 PM IST

ಪುತ್ತೂರು (ದಕ್ಷಿಣ ಕನ್ನಡ): ರಾಜ್ಯಕ್ಕೆ ಕಾಂಗ್ರೆಸ್ ರಾಷ್ಟ್ರೀಯ​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ದೋಸೆ ಮಾಡಿಸಿದರೆ ಜನರು ಮತ ಹಾಕಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.

ಪುತ್ತೂರಿನಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್​​​ ಪಕ್ಷ 1960ರ ಹಳೆ ಟೇಪ್ ರೆಕಾರ್ಡಿಂಗ್ ಇದ್ದಹಾಗೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈ ಕಾನೂನು ತೆಗೆದುಹಾಕುತ್ತಿವಿ, ಆ ಕಾನೂನು ಮಾಡಲು ಬಿಡುವುದಿಲ್ಲ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ರಿವರ್ಸ್ ಗೇರ್ ಎಂದು ಹೇಳಿದ್ದಾರೆ. ಕಾಂಗ್ರೆಸ್ ರಿವರ್ಸ್ ಗೇರ್ ಹಾಕಿ ಓಡುತ್ತಿದೆ. ಆದರೆ ಬಿಜೆಪಿ ಡಬಲ್ ಎಂಜಿನ್ ಮೂಲಕ ಮುಂದೆ ಸಾಗುತ್ತಿದೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸವಾಗಿದೆ ಎಂದು ಹೇಳಿದರು.

ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಗೆಲುವು ನಿಶ್ಚಿತ. ಸಂಘಟನೆಯಲ್ಲಿ ಕೆಲಸ ಮಾಡಿದ ಆಧಾರದಲ್ಲಿ ಪಕ್ಷ ಈ ಬಾರಿ ಆಶಾ ತಿಮ್ಮಪ್ಪ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಬಿಜೆಪಿಯಲ್ಲಿ ಕಾಂಗ್ರೆಸ್ ಪಕ್ಷದಂತೆ ಕೇವಲ ಇಬ್ಬರು ಕುಳಿತು ಅಭ್ಯರ್ಥಿಯನ್ನು ಆಯ್ಕೆ ಮಾಡುವ ವ್ಯವಸ್ಥೆಯಿಲ್ಲ. ತಳಮಟ್ಟದ ಶಕ್ತಿ ಕೇಂದ್ರ, ಜಿಲ್ಲಾ ಕೇಂದ್ರ, ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿ, ಪಾರ್ಲಿಮೆಂಟರಿ ಸಮಿತಿ ಚರ್ಚೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತಗೊಳಿಸುತ್ತಾರೆ ಎಂದರು.

ಗೆಲ್ಲುವ ಪಕ್ಷದಲ್ಲಿ ಆಕಾಂಕ್ಷಿಗಳು ಇರುವುದು ಸಾಮಾನ್ಯವಾಗಿದ್ದು, ಪುತ್ತೂರಿನಲ್ಲೂ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಪಕ್ಷ ಎಲ್ಲರಿಗೂ ಸ್ಥಾನಮಾನವನ್ನು ಕೊಡುತ್ತೆ, ಆದರೆ ಸ್ವಲ್ಪ ಸಮಾಧಾನದಲ್ಲಿ ಕಾಯಬೇಕು ಎಂದ ಅವರು ಯುವಜನತೆಗೆ ಬಿಜೆಪಿ ಖಂಡಿತವಾಗಿಯೂ ಅವಕಾಶ ನೀಡುತ್ತದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಒಳ್ಳೇ ಕೆಲಸ ಮಾಡಿದವರು ಒಂದೇ ಸ್ಥಾನದಲ್ಲಿ ಶಾಶ್ವತ ಎನ್ನುವ ವ್ಯವಸ್ಥೆ ಪಕ್ಷದಲ್ಲಿಲ್ಲ. ಇಂದು ಒಂದು ಸ್ಥಾನವಾದರೆ, ನಾಳೆ ಇನ್ನೊಂದು ಸ್ಥಾನಕ್ಕೆ ಹೋಗೋದು ಪಕ್ಷದ ವ್ಯವಸ್ಥೆಯೊಳಗಿದೆ ಎಂದು ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಸೂರ್ಯ, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ರೇಣುಖಾ ಪ್ರಸಾದ್, ಅಪ್ಪಯ್ಯ ಮಣಿಯಾಣಿ ಆರ್. ಸಿ. ನಾರಾಯಣ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಪಿ. ಜಿ. ಜಗನ್ನಿವಾಸ್ ರಾವ್ ಮತ್ತಿತರರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಏ.30ರಂದು ಸುಳ್ಯಕ್ಕೆ ಜೆಪಿ ನಡ್ಡಾ ಆಗಮನ.. ಪ್ರವೀಣ್ ನೆಟ್ಟಾರು ಮನೆಗೂ ಭೇಟಿ ಸಾಧ್ಯತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.