ETV Bharat / state

2ನೇ ಪತ್ನಿಗೂ ಆರೇ ತಿಂಗಳಲ್ಲಿ 'ತಲಾಖ್': ಪತಿ ವಿರುದ್ಧ ಮಂಗಳೂರು ಪೊಲೀಸರಿಗೆ ದೂರು

author img

By

Published : May 31, 2023, 10:31 AM IST

ಮದುವೆಯಾಗಿ ಆರು ತಿಂಗಳಲ್ಲೇ ಪತಿ ತನ್ನ ಪತ್ನಿಗೆ ಹಲ್ಲೆ ನಡೆಸಿ ತಲಾಕ್​ ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಲ್ಲಿ ತಲಾಕ್​ ಪ್ರಕರಣ
ಮಂಗಳೂರಲ್ಲಿ ತಲಾಕ್​ ಪ್ರಕರಣ

ಸಂತ್ರಸ್ತ ಮಹಿಳೆಯ ಹೇಳಿಕೆ

ಮಂಗಳೂರು: ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಿದ್ದರೂ ಆಗಾಗ ತಲಾಖ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಹೊಸ ನಿದರ್ಶನವೆಂಬಂತೆ ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಲ್ಲಿ ನಿರ್ದಯಿ ಪತಿಯೋರ್ವನು ಪತ್ನಿ ಮೇಲೆ ಹಲ್ಲೆ ನಡೆಸಿ ತಲಾಖ್ ಹೇಳಿ ದಾಂಪತ್ಯವನ್ನೇ ಮುರಿದ ಘಟನೆ ನಡೆದಿದೆ.

ನಗರದ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಪತ್ನಿ ಶಬಾನಾ ಅವರನ್ನು ಹಿಂಸಿಸಿ ತಲಾಖ್ ನೀಡಿದ್ದಾರೆ ಎಂದು ಪತ್ನಿ ದೂರಿದ್ದಾರೆ. ಶಬಾನಾಗೆ ಮೊದಲ ಮದುವೆಯಲ್ಲಿ ಎರಡು ಮಕ್ಕಳಿದ್ದವು.‌ ಮೊದಲ ಪತಿಯಿಂದ ಬೇರೆಯಾಗಿದ್ದ ಶಬಾನಾ ಆರು ತಿಂಗಳ ಹಿಂದಷ್ಟೇ ಹುಸೇನ್ ಎಂಬವರನ್ನು ವರಿಸಿದ್ದರು. ಎರಡು ತಿಂಗಳು ಚೆನ್ನಾಗಿಯೇ ಸಂಸಾರ ನಡೆದಿತ್ತು. ಬಳಿಕ ನಯವಾಗಿ ಮಾತನಾಡಿ ಸಾಲದಲ್ಲಿದ್ದೇನೆ ಎಂದು ಹುಸೇನ್ ಪತ್ನಿಯ ಚಿನ್ನಾಭರಣ ಸೇರಿ 10 ಲಕ್ಷ ರೂಪಾಯಿ ಪಡೆದು ಪತ್ನಿಯನ್ನು ತವರು ಮನೆಯಲ್ಲೇ ಬಿಟ್ಟಿದ್ದರಂತೆ.

ಅಷ್ಟೇ ಅಲ್ಲದೇ ಗರ್ಭಿಣಿಯಾಗಿದ್ದ ಆಕೆಗೆ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಕೂಡ ಮಾಡಿಸಿದ್ದರಂತೆ. ಶಾಬಾನಾ ಹುಸೇನ್​ ಮನೆಗೆ ಬಂದಿದ್ದ ವೇಳೆ ಮನಬಂದಂತೆ ಥಳಿಸಿ ಮೂರು ಬಾರಿ ತಲಾಖ್ ಹೇಳಿ ದಾಂಪತ್ಯ ಸಂಬಂಧಕ್ಕೆ ತಿಲಾಂಜಲಿ ಇಟ್ಟರಂತೆ. ತೀವ್ರ ಹಲ್ಲೆಯಿಂದ ಗಾಯಗೊಂಡಿದ್ದ ಶಬಾನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊದಲ ಪತ್ನಿಗೂ ತಲಾಖ್ ಹೇಳಿ ಸಂಬಂಧ ಕಡಿದುಕೊಂಡಿದ್ದ ಹುಸೇನ್ ಇದೀಗ ಎರಡನೇ ಪತ್ನಿಗೂ ತಲಾಖ್ ಹೇಳಿದ್ದಾರೆ. ಪರಿಣಾಮ ಸಂತ್ರಸ್ತೆ ಶಬಾನಾ ನ್ಯಾಯಕ್ಕಾಗಿ ಪಾಂಡೇಶ್ವರ ಪೊಲೀಸ್​ ಠಾಣೆಯಲ್ಲಿ ಹುಸೇನ್​ ವಿರುದ್ಧ ದೂರು ದಾಖಲಿಸಿದ್ದಾರೆ. ತನಗಾದ ಅನ್ಯಾಯ ಮತ್ತೊಬ್ಬ ಹೆಣ್ಣಿಗೆ ಆಗಬಾರದೆಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು.

ಇದನ್ನೂ ಓದಿ: ಬೆಂಗಳೂರಲ್ಲಿ ಲಿಫ್ಟ್​ನಲ್ಲೇ ಪತ್ನಿಗೆ ತಲಾಕ್ ನೀಡಿ ಮನೆಯಿಂದ ಹೊರಹಾಕಿದ ಪತಿರಾಯ!

ಲಿಫ್ಟ್​ಲ್ಲಿ ತಲಾಕ್​ ನೀಡಿದ ಪತಿ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರಕರಣದಲ್ಲಿ ವರದಕ್ಷಿಣೆ ತರದ ಪತ್ನಿಯನ್ನು, ಪತಿರಾಯ ಲಿಫ್ಟ್​ನಲ್ಲೇ ತಲಾಖ್​ ನೀಡಿದ್ದ ಘಟನೆ ವರದಿಯಾಗಿತ್ತು. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ಲಿಫ್ಟ್​​ನಲ್ಲೇ ತನ್ನ ಹೆಂಡತಿಗೆ ತಲಾಕ್ ಹೇಳಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಿದ ಸಂತ್ರಸ್ತ ಮಹಿಳೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದರು.

ಮದುವೆಯ ವೇಳೆ 30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದು ವಿವಾಹವಾಗಿದ್ದ ಅಕ್ರಂ ತನ್ನ ಹೆಂಡತಿಯ ತವರಿಗೆ ತೆರಳಿ 10 ಲಕ್ಷ ರೂ. ಹಣ ತರುವಂತೆ ಕಿರುಕುಳ ನೀಡಿದ್ದನಂತೆ. ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಲಿಫ್ಟ್​​ನಲ್ಲೇ ತನ್ನ ಪತ್ನಿಗೆ ತಲಾಕ್ ಹೇಳಿ, ಮನೆಯಿಂದ ಹೊರಹಾಕಿದ್ದಾನೆ ಎಂದು ಮಹಿಳೆ ದೂರಿದ್ದರು. ಪತಿ ವಿರುದ್ಧ ನೀಡಿದ ದೂರಿನಂತೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ವಾಟ್ಸ್ ಆಪ್ ಮೂಲಕ ತ್ರಿವಳಿ ತಲಾಕ್ : ​ನ್ಯಾಯಕ್ಕಾಗಿ ಸಂತ್ರಸ್ತೆಯ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.