ETV Bharat / state

ಚಂದ್ರಯಾನ ಸಫಲವಾಗಲು ವಾಜಪೇಯಿ ನೀಡಿದ ನೆರವೇ ಕಾರಣ : ಡಾ.ಕಸ್ತೂರಿ ರಂಗನ್ - Space Seminar at St. Aloysius College, Mangalore

ಚಂದ್ರಯಾನ-1 ಸಫಲವಾಗಲು ಅಂದಿನ‌ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆರವೇ ಕಾರಣ. ನಾವು ಮಾಡಿರುವ ಕಾರ್ಯ ಸದುದ್ದೇಶದಿಂದ ಕೂಡಿದ್ದರೆ ಅದರ ಹಿಂದೆ ಇಡೀ ದೇಶವೇ ಇರುತ್ತದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್  ಹೇಳಿದರು.

Symposium on Space and Beyond in Mangaluru
ಡಾ.ಕಸ್ತೂರಿ ರಂಗನ್, ಮಾಜಿ ಅಧ್ಯಕ್ಷ ಇಸ್ರೋ
author img

By

Published : Dec 4, 2019, 10:33 PM IST

ಮಂಗಳೂರು: ಚಂದ್ರಯಾನ ಸಫಲವಾಗಲು ಬರೀ ವಿಜ್ಞಾನಿಗಳ ಪ್ರಯತ್ನ ಮಾತ್ರ ಕಾರಣವಲ್ಲ, ರಾಜಕೀಯ ವ್ಯಕ್ತಿಗಳ ನೆರವೂ ಅಷ್ಟೇ ಮುಖ್ಯವಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದರು.

ಡಾ.ಕಸ್ತೂರಿ ರಂಗನ್, ಮಾಜಿ ಅಧ್ಯಕ್ಷ ಇಸ್ರೋ

ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ 'ಬಾಹ್ಯಾಕಾಶ ಮತ್ತು ಅದಕ್ಕೂ ಮೀರಿ' ಎಂಬ ವಿಷಯದ ಬಗ್ಗೆ ಮಾತನಾಡಿ, ಚಂದ್ರಯಾನ-1 ಸಫಲವಾಗಲು ಅಂದಿನ‌ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆರವೇ ಕಾರಣ ಎಂದು ಹೇಳಿದರು.

ನಾವು ಮಾಡಿರುವ ಕಾರ್ಯ ಸದುದ್ದೇಶದಿಂದ ಕೂಡಿದ್ದರೆ ಅದರ ಹಿಂದೆ ಇಡೀ ದೇಶವೇ ಇರುತ್ತದೆ. ಚಂದ್ರನ ಬಗ್ಗೆ ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿರದ ಕಾರಣ ಇಸ್ರೋ ಚಂದ್ರನ ಬಗ್ಗೆ ಸಂಶೋಧನೆ ಮಾಡಲು ಚಂದ್ರಯಾನ-1 ನ್ನು ಆರಂಭಿಸಿತು. ಸೌರ ಮಂಡಲದ ಇತರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುವ ಮೊದಲು ಮೂಲ ಮಾಹಿತಿ ತಿಳಿಯುವ ಅಗತ್ಯವಿದೆ ಎಂಬ ಕಾರಣಕ್ಕೆ ಇಸ್ರೋ ಚಂದ್ರಯಾನವನ್ನು‌ ಮೊದಲಿಗೆ ಆಯ್ಕೆ ಮಾಡಿತ್ತು. ಚಂದ್ರಯಾನ-1ರಲ್ಲಿ ಚಂದ್ರನ ಮೇಲೆ ನೀರು ಇದೆ ಎಂಬ ಮಹತ್ತರವಾದ ಮಾಹಿತಿ ಲಭ್ಯವಾಗಿದೆ. ಇದರ ಯಶಸ್ಸಿನ ಬಳಿಕ ನಾವು ಮಂಗಳಯಾನವನ್ನು ಕೈಗೊಂಡಿದ್ದೆವು. ಮೊದಲ ಬಾರಿಯಲ್ಲಿಯೇ ಮಂಗಳಯಾನ ನಡೆಸಿ ಮಹತ್ತರವಾದ ಯಶಸ್ಸು ಸಾಧಿಸಿದ್ದೆವು ಎಂದರು.

Intro:ಮಂಗಳೂರು: ಚಂದ್ರಯಾನ ಸಫಲವಾಗಲು ಬರೀ ವಿಜ್ಞಾನಿಗಳು ಪ್ರಯತ್ನ ಮಾತ್ರ ಕಾರಣವಲ್ಲ‌. ರಾಜಕೀಯ ವ್ಯಕ್ತಿಗಳ ನೆರವೂ ಅಷ್ಟೇ ಪ್ರಾಮುಖ್ಯವಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಅಭಿಪ್ರಾಯ ಪಟ್ಟರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಬಾಹ್ಯಾಕಾಶಕ್ಕೆ ಮತ್ತು ಅದಕ್ಕೂ ಮೀರಿ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಚಂದ್ರಯಾನ-1 ಸಫಲವಾಗಲು ಅಂದಿನ‌ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆರವೇ ಕಾರಣ ಎಂದು ಹೇಳಿದರು.

Body:ನಾವು ಮಾಡಿರುವ ಕಾರ್ಯ ಸದುದ್ದೇಶದಿಂದ ಕೂಡಿದ್ದರೆ ಅದರ ಹಿಂದೆ ಇಡೀ ದೇಶವೇ ಇರುತ್ತದೆ. ಚಂದ್ರನ ಬಗ್ಗೆ ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿರದ ಕಾರಣ ಇಸ್ರೋ ಚಂದ್ರನ ಬಗ್ಗೆ ಸಂಶೋಧನೆ ಮಾಡಲು ಚಂದ್ರಯಾನ-1 ನ್ನು ಆರಂಭಿಸಿತು. ಸೌರ ಮಂಡಲದ ಇತರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುವ ಮೊದಲು ಮೂಲ ಮಾಹಿತಿ ತಿಳಿಯುವ ಅಗತ್ಯವಿದೆ ಎಂಬ ಕಾರಣಕ್ಕೂ ಇಸ್ರೋ ಚಂದ್ರಯಾನವನ್ನು‌ ಮೊದಲಿಗೆ ಆಯ್ಕೆ ಮಾಡಿತ್ತು. ಚಂದ್ರಯಾನ- 1 ರಲ್ಲಿ ಚಂದ್ರನ ಮೇಲೆ ನೀರು ಇದೆ ಎಂಬ ಮಹತ್ತರವಾದ ಮಾಹಿತಿ ಲಭ್ಯವಾಗಿದೆ. ಇದರ ಯಶಸ್ಸಿನ ಬಳಿಕ ನಾವು ಮಂಗಳಯಾನವನ್ನು ಕೈಗೊಂಡಿದ್ದೆವು. ಮೊದಲ ಬಾರಿಯಲ್ಲಿಯೇ ಮಂಗಳಯಾನ ನಡೆಸಿ ಮಹತ್ತರವಾದ ಯಶಸ್ಸು ಸಾಧಿಸಿದ್ದೆವು ಎಂದು ಡಾ.ಕಸ್ತೂರಿ ರಂಗನ್ ಹೇಳಿದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.