ETV Bharat / state

ಹುಡುಗಿ ವಿಚಾರದಲ್ಲಿ ಯುವಕನಿಗೆ ಹೊಡೆದು ಹಣಕ್ಕೆ ಬೇಡಿಕೆ.. ಕಡಬದಲ್ಲಿ ಹನಿಟ್ರ್ಯಾಪ್ ಶಂಕೆ

author img

By

Published : Oct 6, 2022, 7:13 AM IST

ಯುವಕನಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ಕಡಬ ವ್ಯಾಪ್ತಿಯಲ್ಲಿ ನಡೆದಿದೆ.

ಕಡಬದಲ್ಲಿ ಹನಿಟ್ರ್ಯಾಪ್ ಶಂಕೆ
ಕಡಬದಲ್ಲಿ ಹನಿಟ್ರ್ಯಾಪ್ ಶಂಕೆ

ಕಡಬ (ದಕ್ಷಿಣ ಕನ್ನಡ): ಯುವಕನೋರ್ವನಿಗೆ ತಂಡವೊಂದು ಹನಿಟ್ರ್ಯಾಪ್​​ ಮಾಡಲು ಯತ್ನಿಸಿರುವ ಶಂಕೆ ಕಡಬ ವ್ಯಾಪ್ತಿಯಲ್ಲಿ ವ್ಯಕ್ತವಾಗಿದೆ. ಇನ್ನು ಹನಿಟ್ರ್ಯಾಪ್​ಗೆ ಯತ್ನಿಸಿದ ತಂಡದ ಓರ್ವನನ್ನು ಕಡಬ ಪೊಲೀಸರು ಸಿನಿಮೀಯ ರೀತಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಅಕ್ಟೋಬರ್ 4ರ ತಡರಾತ್ರಿ ಕಡಬದ ಮರ್ದಾಳಕ್ಕೆ ಬಂದಿದ್ದ ಮಂಗಳೂರು ಸಮೀಪದ ಯುವಕನನ್ನು ಯುವಕರ ತಂಡವೊಂದು ಕರ್ಮಾಯಿ ಕೋರಿಯಾರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿ ಹಣ ನೀಡದಿದ್ದರೆ ಹುಡುಗಿಯ ವಿಚಾರದಲ್ಲಿ ನಿನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆವೊಡ್ಡಿ ಹಣ ತರುವಂತೆ ಹೇಳಿ ಕಳುಹಿಸಿದ್ದರು ಎನ್ನಲಾಗ್ತಿದೆ.

ನಂತರದಲ್ಲಿ ಕಡಬಕ್ಕೆ ಬಂದ ಯುವಕ ತನ್ನ ಸ್ನೇಹಿತರೊಬ್ಬರ ಮೂಲಕ ಕಡಬ ಪೊಲೀಸರನ್ನು ಭೇಟಿಯಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಬಳಿಕ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು, ಸಂತ್ರಸ್ತನ ಮೂಲಕವೇ ಆರೋಪಿಗಳಿಗೆ ಹಣ ನೀಡುತ್ತೇನೆ ಕಡಬಕ್ಕೆ ಬನ್ನಿ ಎಂದು ಕರೆಸಿದ್ದಾರೆ. ಅದರಂತೆ ಮೂವರು ಆರೋಪಿಗಳು ಕಡಬಕ್ಕೆ ಬಂದಿದ್ದರು. ಆರೋಪಿಗಳಿಗೆ ಪೊಲೀಸರ ಇರುವಿಕೆಯ ಮಾಹಿತಿ ತಿಳಿದು, ಕೂಡಲೇ ಕಡಬದಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ನೂಜಿಬಾಳ್ತಿಲ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ. ಆದರೆ ಒಬ್ಬ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಆರೋಪಿಗಳು ಸಂಪೂರ್ಣ ಗಾಂಜಾ ಸೇವನೆ ಮಾಡುತ್ತಿದ್ದರು ಮತ್ತು ಅವರು ಈ ಹಿಂದೆಯೂ ಇಂತಹದ್ದೇ ಕೃತ್ಯ ನಡೆಸಿದ್ದಾಗಿ ಮಲಯಾಳಂನಲ್ಲಿ ಮಾತನಾಡುತ್ತಿದ್ದರು ಹಾಗೂ ತನ್ನ ಮೇಲೆ ಒಂಬತ್ತು ಜನರ ತಂಡದಿಂದ ಹಲ್ಲೆ ನಡೆದಿದೆ ಎಂದು ಸಂತ್ರಸ್ತ ಯುವಕ ಹೇಳುತ್ತಿದ್ದಾನೆ. ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ.

(ಓದಿ: ಬಿಜೆಪಿ ಮುಖಂಡನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆಡಿಯೋ, ವಿಡಿಯೋ ವೈರಲ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.