ಮಂಗಳೂರು : ನಗರದ ಹಳೆಯ ವಿಮಾನ ನಿಲ್ದಾಣಕ್ಕೆ ನಿನ್ನೆ ಮಧ್ಯಾಹ್ನ ಆಕಾಶ ಮಾರ್ಗವಾಗಿ ನಿಗೂಢ ವಸ್ತುವೊಂದನ್ನ ಬಂದಿಳಿದಿದ್ದ ಪರಿಣಾಮ ಭದ್ರತಾ ಸಿಬ್ಬಂದಿ ಹೈ ಅಲರ್ಟ್ ಆಗಿ ತಪಾಸಣೆ ನಡೆಸಿದ ಘಟನೆ ನೀಡಿದೆ.
ನಿನ್ನೆ ಮಧ್ಯಾಹ್ನ ಸುಮಾರಿಗೆ ಆಕಾಶ ಮಾರ್ಗವಾಗಿ ನೀಲಿ ಬಣ್ಣದ ಬೆಳಕು ಬೀರಿಕೊಂಡು ಯಾವುದೋ ವಸ್ತುವೊಂದು ಹಾರಿ ಬರುತ್ತಿರುವುದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ತಕ್ಷಣ ಸಿಐಎಸ್ಎಫ್ ತಂಡ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಯಾರಾಗಿತ್ತು. ಆ ವಸ್ತುವಿನ ಬಗ್ಗೆ ತಲೆಕೆಡಿಸಿಕೊಂಡ ಭದ್ರತಾ ಸಿಬ್ಬಂದಿ ತಕ್ಷಣ ತಪಾಸಣೆ ನಡೆಸಿತು. ಅದೊಂದು ಆಟಿಕೆ ಹೆಲಿಕಾಪ್ಟರ್ ಎಂದು ತಿಳಿದು ಬಂದಿದೆ.
ಆದರೂ ನೀಲಿ ಬೆಳಕು ಬೀರುತ್ತಿರುವುದನ್ನೇ ಗಮನಿಸಿದ ಭದ್ರತಾ ಸಿಬ್ಬಂದಿ, ಈ ಬಗ್ಗೆ ಅನುಮಾನಗೊಂಡಿದ್ದು ಸಿಐಎಸ್ಎಫ್ ತಂಡದ ತಜ್ಞರು ಪರಿಶೀಲನೆ ನಡೆಸಿದರು. ಅದೊಂದು ಆಟಿಕೆ ಹೆಲಿಕಾಪ್ಟರ್ ಎಂದು ಭದ್ರತಾ ಸಿಬ್ಬಂದಿ ದೃಢಪಡಿಸಿದರು. ಆ ಮೂಲಕ ಅಲ್ಲಿ ಕೆಲಕಾಲ ಉಂಟಾದ ಆತಂಕದ ವಾತಾವರಣ ತಿಳಿಯಾಗಿದೆ.