ETV Bharat / state

ದುಡಿಮೆಯ ಅರ್ಧದಷ್ಟು ಹಣ ಬಡವರ ಮನೆ ನಿರ್ಮಾಣಕ್ಕೆ ನೀಡುವ ಸೂರ್ಯನಾರಾಯಣ ಭಟ್​​..

ಕಶೆಕೋಡಿಯ ಸೂರ್ಯನಾರಾಯಣ ಭಟ್, ತಮ್ಮ ಆದಾಯದ ಶೇ.50ರಷ್ಟನ್ನು ಸಮಾಜದ ಕಾರ್ಯಕ್ಕಾಗಿ ಮೀಸಲಿರಿಸಿದ್ದು, ತಾವೇ ಜಾಗ ಖರೀದಿಸಿ, ಅವುಗಳಲ್ಲಿ ತಲಾ 4 ಸೆಂಟ್ಸ್​​ಗಳಲ್ಲಿ ಮನೆ ಕಟ್ಟಿಸಿದ್ದು, ಅದನ್ನು ಬಡವರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾವುದೇ ಪ್ರತಿಫಲದ ಭಯಕೆಯಿಲ್ಲದೆ ನಡೆಸುತ್ತಿರುವ ಅವರ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಪ್ರಶಂಸೆ ಕೇಳಿ ಬಂದಿದೆ.

author img

By

Published : May 11, 2020, 7:27 PM IST

Suryanarayana Bhat, who built house for the poor with his ernings
ದುಡಿಮೆಯ ಅರ್ಧದಷ್ಟು ಹಣ ಬಡವರ ಮನೆ ನಿರ್ಮಾಣಕ್ಕೆ ನೀಡಿದ ಸೂರ್ಯನಾರಾಯಣ ಭಟ್​​

ಬಂಟ್ವಾಳ(ದಕ್ಷಿಣ ಕನ್ನಡ): ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ, ವಿಶ್ವ ಹಿಂದೂ ಪರಿಷತ್ತಿನಲ್ಲಿ ಜಿಲ್ಲೆಯ ಸತ್ಸಂಗ ಪ್ರಮುಖ ಹಾಗೂ ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕರಾಗಿರುವ ಕಲ್ಲಡ್ಕ ಸಮೀಪ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಮೂವರು ಅರ್ಹರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಲಾಕ್​​​ಡೌನ್ ಸಂದರ್ಭ ಎಲ್ಲರೂ ಸಂಕಷ್ಟದಲ್ಲಿರುವ ವೇಳೆ ಸೂರ್ಯನಾರಾಯಣ ಭಟ್ ಅವರ ಈ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ಮನೆಗಳ ಹಸ್ತಾಂತರ ಕಾರ್ಯಕ್ರಮ ಸೋಮವಾರ ಕಶೆಕೋಡಿಯಲ್ಲಿ ಸರಳವಾಗಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಮನೆಗಳ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ಆಶೀರ್ವದಿಸಿದರು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕ.ಕೃಷ್ಣಪ್ಪ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಪೌರೋಹಿತ್ಯವನ್ನು ನಡೆಸುವ ಕಶೆಕೋಡಿ ಸೂರ್ಯನಾರಾಯಣ ಭಟ್, ತಮ್ಮ ಆದಾಯದ ಶೇ.50ರಷ್ಟನ್ನು ಸಮಾಜದ ಕಾರ್ಯಕ್ಕಾಗಿ ಮೀಸಲಿರಿಸಿದ್ದಾರೆ. ತಾವೇ ಜಾಗ ಖರೀದಿಸಿ, ಅವುಗಳಲ್ಲಿ ತಲಾ 4 ಸೆಂಟ್ಸ್​​ಗಳಲ್ಲಿ ಮನೆ ಕಟ್ಟಿಸಿದ್ದಾರೆ. ಈ ಮನೆಗಳಿಗೆ ವಿದ್ಯುತ್, ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಸುಮಾರು 30ಲಕ್ಷ ರೂ. ವೆಚ್ಚ ತಗುಲಿದೆ. ಕಳೆದ ವರ್ಷ ಇದೇ ರೀತಿ ಒಬ್ಬರಿಗೆ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಿದ್ದರು. ಒಟ್ಟು 4 ಮನೆಗಳನ್ನು ಅವರು ಅರ್ಹರಿಗೆ ಒದಗಿಸಿದಂತಾಗಿದೆ.

ಇದಲ್ಲದೆ ಬಸ್ ನಿಲ್ದಾಣ, ಬೀದಿದೀಪ, ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ. ವರ್ಷಂಪ್ರತಿ 5 ಮಕ್ಕಳ ಶಿಕ್ಷಣಕ್ಕೆ ನೆರವು, ಆರ್ತತ್ರಾಣ ಯೋಜನೆಯನ್ವಯ 7 ಮನೆಗಳ ತಿಂಗಳ ಖರ್ಚು ಒದಗಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.