ಮಂಗಳೂರು: ಸುರತ್ಕಲ್ನ ಗುಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮುಳುಗಿದ ಭಗವತಿ ಪ್ರೇಮ್ ಡ್ರೆಜ್ಜರ್ ಸ್ಕ್ರಾಪ್‌ಗೊಳಿಸುವ ಕಾರ್ಯ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಸ್ಕ್ರಾಪ್ ಮಾಡುವ ಕಾರ್ಯ ನಡೆಯುತ್ತಿದೆ. ಇದು ಆರು ತಿಂಗಳಲ್ಲಿ ಸಂಪೂರ್ಣಗೊಳ್ಳಲಿದೆ.
ಭಗವತಿ ಪ್ರೇಮ್ ಡ್ರೆಜ್ಜರ್ನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿತ್ತು: ಎನ್‌ಎಂಪಿಎಯಲ್ಲಿ ಹೂಳೆತ್ತಲು ಗುತ್ತಿಗೆ ಪಡೆದಿದ್ದ ಮರ್ಕಟೇರ್ ಕಾರ್ಪೊರೇಷನ್ ಸಂಸ್ಥೆಗೆ ಸೇರಿದ್ದ 2 ಡ್ರೆಜ್ಜರ್‌ಗಳಲ್ಲಿ ಇದು ಕೂಡ ಒಂದಾಗಿತ್ತು. ಕಾಮಗಾರಿಗೆ ಸಂಬಂಧಿಸಿ ಎರಡೂ ಹಡಗುಗಳನ್ನು ತಡೆ ಹಿಡಿಯಲಾಗಿದ್ದು, ಬಳಿಕ ಸಮುದ್ರದಲ್ಲಿ ನಿಲ್ಲಿಸಲಾಗಿತ್ತು. ಭಗವತಿ ಪ್ರೇಮ್ ಡ್ರೆಜ್ಜರ್ ಸಮುದ್ರದಲ್ಲಿ ನಿಲುಗಡೆ ಮಾಡಲಾಗಿದ್ದ ಸಂದರ್ಭ ಮುಳುಗಿದ್ದು, ಅದರಲ್ಲಿದ್ದವರನ್ನು ರಕ್ಷಣೆ ಮಾಡಲಾಗಿತ್ತು.
ಕ್ಲಿಯರೆನ್ಸ್ ಸಿಗದ ಹಿನ್ನೆಲೆ ಡ್ರೆಜ್ಜರ್ ಸಮುದ್ರದಲ್ಲಿಯೇ ಬಾಕಿ: ಬಳಿಕ ಸಮುದ್ರದಲ್ಲಿ ಉಳಿದಿದ್ದ ಭಗವತಿ ಪ್ರೇಮ್ ಹಡಗನ್ನು 2019ರ ಅ.3 ರಂದು ಗುಡ್ಡೆಕೊಪ್ಪ ಸಮುದ್ರ ತೀರಕ್ಕೆ ತಂದು ನಿಲ್ಲಿಸಲಾಗಿತ್ತು. ಈ ಡ್ರೆಜ್ಜರ್‌ನ್ನು ಬೇರೆಡೆಗೆ ಕೊಂಡೊಯ್ದು ಸ್ಕಾರ್ಫ್ ಗೊಳಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಕ್ಲಿಯರೆನ್ಸ್ ಸಿಗದ ಹಿನ್ನಲೆಯಲ್ಲಿ ಈ ಡ್ರೆಜ್ಜರ್ ಸಮುದ್ರದಲ್ಲಿಯೇ ಉಳಿದಿತ್ತು.
ಡ್ರೆಜ್ಜರ್ ಸಮುದ್ರದಲ್ಲಿಯೇ ಉಳಿದಿತ್ತು: ಡ್ರೆಜ್ಜರ್ ಒಡೆಯಲು ವಹಿಸಿಕೊಂಡಿದ್ದ ಸಂಸ್ಥೆಯು ಪಾಲಿಕೆ ಕಚೇರಿ, ತಹಶೀಲ್ದಾರ್ ಕಚೇರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸಿಆರ್‌ಝಡ್‌ವರೆಗೆ ಪರವಾನಗಿ ಪಡೆಯಬೇಕಾಗಿದ್ದು, ಅದಕ್ಕೆ ವರ್ಷಗಳೇ ಬೇಕಾಗಿದ್ದವು. ಅದರಿಂದಾಗಿ ಡ್ರೆಜ್ಜರ್ ಸಮುದ್ರದಲ್ಲಿಯೇ ಉಳಿದಿತ್ತು. ಈ ನಡುವೆ ಡ್ರೆಜ್ಜರ್‌ನಲ್ಲಿ ರಂಧ್ರ ಕಂಡು ಬಂದಿದೆ.
ಇದನ್ನೂ ಓದಿ: ಬೈಸ್ಕೈನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ: ಡಿ ಸಿ ಪವನ್ಕುಮಾರ್
ಮೀನುಗಾರರ ಮನವಿಗೆ ಸೂಕ್ತ ಸ್ಪಂದನೆ ದೊರಕಿದೆ: ಡ್ರೆಜ್ಜರ್ ಅನ್ನು ಮಾಲಿನ್ಯವಿಲ್ಲದೇ ಕತ್ತರಿಸಿ ತೆಗೆಯಬೇಕೆಂಬ ಮೀನುಗಾರರ ಮನವಿಗೆ ಸೂಕ್ತ ಸ್ಪಂದನೆ ದೊರಕಿದೆ. ಸುಮಾರು 50ರಷ್ಟು ಉತ್ತರ ಭಾರತದ ಕಾರ್ಮಿಕರು ಡ್ರೆಜ್ಜರ್ ಕತ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದು, ಆರು ತಿಂಗಳಲ್ಲಿ ಡ್ರೆಜ್ಜರ್ ಅನ್ನು ಸಂಪೂರ್ಣ ಕತ್ತರಿಸಿ ಗುಜರಿಗೆ ಹಾಕಲಾಗುತ್ತದೆ. ಸ್ವಲ್ಪ ಕತ್ತರಿಸಿ ಬಳಿಕ ಸಂಪೂರ್ಣ ಡ್ರೆಜ್ಜರ್ ಅನ್ನು ಕಡಲ ತೀರಕ್ಕೆ ಎಳೆದು ಕತ್ತರಿಸುವ ಕಾರ್ಯ ನಡೆಯಲಿದೆ.
ಇದನ್ನು ಓದಿ: ವಾಚ್ ಪಾರ್ಕ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ನೆರವು: ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಭರವಸೆ
ಮುಳುಗಡೆಯಾದ ಹಡಗಿನಿಂದ ತೈಲ ತೆರವು ಕಾರ್ಯಾರಂಭ: ನಗರದ ಉಚ್ಚಿಲ ಸಮುದ್ರ ತೀರದಲ್ಲಿ ಮುಳುಗಡೆಯಾದ ಚೀನಾದ ಹಡಗಿನಿಂದ ಆರು ತಿಂಗಳ ಬಳಿಕ ತೈಲ ತೆರವು ಕಾರ್ಯ ಆರಂಭವಾಗಿದೆ. ಚೀನಾದಿಂದ ಲೆಬನಾನ್‌ಗೆ ಎಂಟು ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಪ್ರಿನ್ಸೆಸ್ ಮಿರಾಲ್ ಹಡಗು 2022ರ ಜೂನ್ 21ರಂದು ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಡೆಯಾಗಿತ್ತು. ಈ ಹಡಗಿನಲ್ಲಿ 160 ಟನ್ ಫರ್ನೆಸ್ ಆಯಿಲ್, 60 ಟನ್ ಡೀಸೆಲ್ ಸೇರಿದಂತೆ 220 ಟನ್ ತೈಲ ಹೊಂದಿದೆ.
ವ್ಯಾಕ್ಯೂಂ ಪಂಪ್ ಮೂಲಕ ತೈಲವನ್ನು ಹೊರಕ್ಕೆಳೆಯುವ ಕಾರ್ಯ: ಸದ್ಯ ಗುಜರಾತ್ ಮೂಲದ ಬನ್ಸಲ್ ಎಂಡೆವರ್ಸ್ ಸಂಸ್ಥೆಗೆ ತೈಲ ತೆರವು ಗುತ್ತಿಗೆಯನ್ನು ನೀಡಲಾಗಿದೆ. ಹೋಸ ಪೈಪ್ ಅಳವಡಿಕೆ ಮಾಡಿ ವ್ಯಾಕ್ಯೂಂ ಪಂಪ್ ಮೂಲಕ ತೈಲವನ್ನು ಹೊರಕ್ಕೆಳೆಯುವ ಕಾರ್ಯ ಪ್ರಾರಂಭವಾಗಿದೆ. 320 ಟನ್ ಸಾಮರ್ಥ್ಯದ ಬಂಕರ್ ಬಾರ್ಜ್ ಮೂಲಕ ತೈಲವನ್ನು ಪೂರ್ಣ ವರ್ಗಾಯಿಸಿ ಹಳೆ ಬಂದರಿಗೆ ತರಲಾಗುತ್ತಿದೆ.
ಓದಿ: ಮೀನುಗಾರರನ್ನು ಸಮುದ್ರಕ್ಕೆ ಎತ್ತಿ ಎಸೆದ ದೊಡ್ಡ ಅಲೆ: ಭಯಾನಕ ವಿಡಿಯೋ