ETV Bharat / state

ಸುಳ್ಯ ಸಂಪತ್ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ - Sulya Crime News

ಬಾಲಚಂದ್ರ ಕಳಗಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಸಂಪತ್‌ ಕುಮಾರ್‌ನನ್ನು ಅ.8 ರಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಪೊಲೀಸ್ ಕಸ್ಟಡಿ ಹಾಗೂ ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Sulya
ನಾಲ್ವರು ಆರೋಪಿಗಳ ಬಂಧನ
author img

By

Published : Oct 12, 2020, 11:54 PM IST

ಸುಳ್ಯ: ಬಾಲಚಂದ್ರ ಕಳಗಿ ಎಂಬಾತನ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಓರ್ವನಾದ ಸಂಪತ್‌ ಕುಮಾರ್‌ನನ್ನು ಅ. 8 ರಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಪೊಲೀಸ್ ಕಸ್ಟಡಿ ಹಾಗೂ ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂಪತ್ ‌ಕುಮಾರ್ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸರ ತಂಡವು ಕೊಲೆಯ ಆರೋಪಿಗಳಾದ ಮನಮೋಹನ್ ಯಾನೆ ಮನು ಕಲ್ಲುಗುಂಡಿ, ಮನೋಜ್ ಯಾನೆ ಮಧು ದಂಡಕಜೆ, ಬಿಪಿನ್ ಕೂಲಿಶೆಡ್ಡ್, ಕಾರ್ತಿಕ್ ದಂಡಕಜೆ ಹಾಗೂ ಶಿಶಿರ್ ಅಡ್ಕಾರ್ ಎಂಬುವರನ್ನು ಬಂಧಿಸಿದ್ದರು. ಇಂದು ಇವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರು ಮನು, ಮಧು, ಬಿಪಿನ್ ಹಾಗೂ ಕಾರ್ತಿಕ್ ಅವರನ್ನು ಪೊಲೀಸ್ ಕಸ್ಟಡಿಗೂ, ಶಿಶಿರ್‌ನನ್ನು ನ್ಯಾಯಾಂಗ ಕಸ್ಟಡಿಗೂ ಒಪ್ಪಿಸಿ ಆದೇಶಿಸಿದ್ದಾರೆ.

ಈ ಆರೋಪಿಗಳನ್ನು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಎಂಬಲ್ಲಿ ಬಿಸ್ಲೆಘಾಟ್ ರಸ್ತೆಯಲ್ಲಿ ಪೊಲೀಸರು ಬಂಧಿಸಿ ಸುಳ್ಯಕ್ಕೆ ಕರೆತಂದಿದ್ದರು, ನಿನ್ನೆ ಇವರನ್ನು ಘಟನಾ ಸ್ಥಳಕ್ಕೆ ಮಹಜರಿಗಾಗಿ ಕರೆದೊಯ್ಯಲಾಗಿತ್ತು. ಇಂದು ಈ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.