ETV Bharat / state

ನಾನು ಅಧಿಕಾರದ ಹಿಂದೆ ಬಿದ್ದಿಲ್ಲ: ಸ್ಪಷ್ಟನೆ ನೀಡಿದ ಸುಳ್ಯ ಶಾಸಕ ಅಂಗಾರ - mla angara

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಸುಳ್ಯ ಶಾಸಕ ಅಂಗಾರ, ನನಗೆ ಅಧಿಕಾರದ ಆಸೆ ಇಲ್ಲ ಎಂದರು.

ಸುಳ್ಯ ಶಾಸಕ ಎಸ್​.ಅಂಗಾರ ಮಾತನಾಡಿದರು.
author img

By

Published : Aug 30, 2019, 12:56 AM IST

ಮಂಗಳೂರು: ನಾನು ಅಧಿಕಾರದ ಹಿಂದೆ ಬಿದ್ದಿಲ್ಲ. ಒಂದು ಸಂಘಟನೆಯ ವಿಚಾರಧಾರೆ ಅಡಿಯಲ್ಲಿ ಬಂದಿದ್ದೇನೆ. ಹಾಗಾಗಿ ನನ್ನ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ನಗರದ ನವಭಾರತ ಸರ್ಕಲ್ ಬಳಿಯಿರುವ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಹಳಷ್ಟು ಪಕ್ಷಗಳು ಇವೆ. ಆದರೆ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷ. ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ನಮ್ಮ ಪಕ್ಷ ರಾಜ್ಯಾಂಗದಲ್ಲಿ ಧರ್ಮ ಇರುವ ಪಕ್ಷ ಎಂದು ತಿಳಿಸಿದರು.

ಸುಳ್ಯ ಶಾಸಕ ಎಸ್​.ಅಂಗಾರ ಮಾತನಾಡಿದರು.

ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಭಾರತ ದೇಶದ ಬಗ್ಗೆ ಯಾವ ಉದ್ದೇಶ ಇತ್ತೋ, ಅದು ಈಗ ಈಡೇರುವ ಕಾಲ ಬಂದಿದೆ. ನಮ್ಮ ಬಾಕಿ ಉಳಿದಿರುವ, ಇರುವ ಉದ್ದೇಶಗಳು ಖಂಡಿತವಾಗಿ ಈಡೇರುತ್ತದೆ. ಆ ಉದ್ದೇಶಗಳು ಈಡೇರಬೇಕಾದರೆ ನಮ್ಮೆಲ್ಲರ ಮನಸ್ಸು, ಭಾವನೆಗಳು ಒಂದಾಗಬೇಕು. ಇಂದು ನಮ್ಮ ನಳಿನ್ ಕುಮಾರ್ ಕಟೀಲ್​ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಸಹಕಾರ ನೀಡುತ್ತೇವೆ ಎಂದರು.

Intro:ಮಂಗಳೂರು: ನಾನು ಅಧಿಕಾರದ ಹಿಂದೆ ಬಿದ್ದಿಲ್ಲ. ಒಂದು ಸಂಘಟನೆಯ ವಿಚಾರಧಾರೆಯಡಿ ಬಂದಿದ್ದೇನೆ. ಹಾಗಾಗಿ ನನ್ನ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ನಗರದ ನವಭಾರತ ಸರ್ಕಲ್ ಬಳಿಯಿರುವ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಅಭಿನಂದನಾ ಸಭೆಯಲ್ಲಿ ಸ್ಪಷ್ಟನೆ ನೀಡಿದರು.

Body:ನಮ್ಮ‌ದೇಶದಲ್ಲಿ ಪಕ್ಷಗಳು ಬಹಳಷ್ಟು ಇದೆ. ಆದರೆ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷ. ರಾಜಕೀಯ ದಲ್ಲಿ ಧರ್ಮ ಇರಬೇಕು. ಆದರೆ ನಮ್ಮ ಪಕ್ಷ ರಾಜ್ಯಾಂಗದಲ್ಲಿ ಧರ್ಮ ಇರುವ ಪಕ್ಷ. ಆದ್ದರಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಯವರಿಗೆ ಭಾರತ ದೇಶದ ಬಗ್ಗೆ ಯಾವ ಉದ್ದೇಶ ಇತ್ತೋ, ಅದು ಈಗ ಈಡೇರುವ ಕಾಲ ಬಂದಿದೆ. ನಮ್ಮ ಇನ್ನು ಬಾಕಿ ಉಳಿದಿರುವ ಇರುವ ಉದ್ದೇಶಗಳೂ ಖಂಡಿತವಾಗಿ ಈಡೇರುತ್ತದೆ. ಆ ಉದ್ದೇಶಗಳು ಈಡೇರಬೇಕಾದರೆ ನಮ್ಮೆಲ್ಲರ ಮನಸ್ಸು, ಭಾವನೆಗಳು ಒಂದಾಗಬೇಕು. ಇಂದು ನಮ್ಮ ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಸಹಕಾರ ನೀಡುತ್ತೇವೆ ಎಂದು ಅಂಗಾರ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.