ಕಡಬ (ದಕ್ಷಿಣ ಕನ್ನಡ): ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ಮತ್ತು ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಚೂರಿ ಇರಿತಕ್ಕೊಳಗಾದ ಘಟನೆ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ನವಾಜ್ ಎಂದು ಗುರುತಿಸಲಾಗಿದೆ. ನೌಫಾಲ್ ಚೂರಿ ಇರಿದ ಆರೋಪಿ.
ಕ್ಷುಲ್ಲಕ ಕಾರಣಕ್ಕೆ ನೌಫಾಲ್ ಹಾಗೂ ನವಾಜ್ ಮಧ್ಯೆ ಈ ಗಲಾಟೆ ನಡೆದಿದ್ದು, ಈ ವೇಳೆ ನೌಫಾಲ್ ಗಲಾಟೆಯಲ್ಲಿ ನವಾಜ್ನ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗುತ್ತಿದೆ. ಪರಿಣಾಮ ನವಾಜ್ ತೀವ್ರ ಗಾಯಗೊಂಡಿದ್ದು, ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವಾಜ್ ನಿನ್ನೆ (ಆ.15 ರಂದು) ಸಂಜೆ ತನ್ನ ಮೊಬೈಲ್ಗೆ ರಿಚಾರ್ಜ್ ಮಾಡಿಸಲೆಂದು ಮನೆಯ ಪಕ್ಕದಲ್ಲಿದ್ದ ನೌಫಲ್ ಅಂಗಡಿಗೆ ಹೋಗಿದ್ದರು. ಈ ವೇಳೆ ಹಳೆಯ ಘಟನೆಯೊಂದನ್ನು ಕಾರಣವಾಗಿಟ್ಟುಕೊಂಡು ನೌಫಾಲ್ ಅವಾಚ್ಯ ಪದಳಿಂದ ಬೈದಿದ್ದಲ್ಲದೇ ನವಾಜ್ಗೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಚೂರಿ ಇರಿತದಿಂದ ಗಾಯಗೊಂಡಿದ್ದ ನವಾಜ್ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ನವಾಜ್ ಚೇರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೊಳ್ಳೇಗಾಲ: ಪಂಕ್ತಿ ಸೇವೆಗೆ ಬಂದಿದ್ದ ಇಬ್ಬರು ಯುವಕರು ನೀರುಪಾಲು