ETV Bharat / state

ನಾಗರಪಂಚಮಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ - ಕುಕ್ಕೆ ಸುಬ್ರಹ್ಮಣ್ಯ

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯಾಗಿದ್ದು, ಈ ಹಬ್ಬದಂದು ಭಕ್ತರು ಶ್ರದ್ಧಾ, ಭಕ್ತಿಯಿಂದ ನಾಗಪ್ಪನಿಗೆ ಪೂಜೆ ಸಲ್ಲಿಸಿದರು. ಕುಕ್ಕೆ ಸುಬ್ರಹ್ಮಣ್ಯ ಮತ್ತು ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ದೇವಾಲಯದಲ್ಲಿ ಭಕ್ತಾದಿಗಳು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಾಗರಪಂಚಮಿ ವಿಶೇಷ
author img

By

Published : Aug 5, 2019, 1:57 PM IST

ಮಂಗಳೂರು: ನಾಗಾರಾಧನೆಯ ಪ್ರಮುಖ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಾಗರ ಕಲ್ಲಿಗೆ ನಾಗತನು ಸೇವೆ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿರುವ ನಾಗರ ಕಲ್ಲಿಗೆ ಭಕ್ತರು ಹಾಲು ಮತ್ತು ಎಳನೀರಿನಿಂದ ಶ್ರದ್ಧಾ ಭಕ್ತಿಪೂರ್ವಕವಾಗಿ ಅಭಿಷೇಕ ನೆರವೇರಿಸಿ ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ನಾಗತನುವಿನೊಂದಿಗೆ ಹಿಂಗಾರ, ಸಂಪಿಗೆ, ಕೇದಗೆ ಮೊದಲಾದ ಹೂಗಳನ್ನು ವಿಶೇಷವಾಗಿ ಸಮರ್ಪಿಸಿದರು.

ನಾಗರಪಂಚಮಿ ವಿಶೇಷ

ಮಂಗಳೂರಿನಲ್ಲೂ ವಿಶೇಷ ಪೊಜೆ: ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತ ಭಕ್ತರು ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ನೆರವೇರಿಸಿದರು.

ಮುಂಜಾನೆ ಐದು ಗಂಟೆಯಿಂದ ಮಧ್ಯಾಹ್ನ ಮಹಾಪೂಜೆಯವರೆಗೆ ಇಲ್ಲಿ ಪ್ರತಿ ವರ್ಷ ಸುಮಾರು 40 ಸಾವಿರದಷ್ಟು ಭಕ್ತರು ನಾಗ ದೇವರಿಗೆ ಸೀಯಾಳಭಿಷೇಕ, ಕ್ಷೀರಾಭಿಷೇಕ ನೆರವೇರಿಸುತ್ತಾರೆ. ನಾಗ ದೇವರ ನೂರಾರು ಮೂರ್ತಿಗಳಿಗೆ ಭಕ್ತರು ‌ನೀಡಿದ ಸೀಯಾಳದ ನೀರು ಮತ್ತು ಹಾಲನ್ನು ದೇವರಿಗೆ ಸಮರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳ ಪ್ರತಿ ಕುಟುಂಬಗಳು ತಮ್ಮ ನಾಗ ದೇವರ ಮೂಲ ಸ್ಥಾನಗಳಿಗೆ ತೆರಳಿ ಕ್ಷೀರಾಭಿಷೇಕ, ಸೀಯಾಳಭಿಷೇಕ ನೆರವೇರಿಸುತ್ತಾರೆ.

ಕುಡುಪು ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಂದು ನಾಗರಪಂಚಮಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆಯಿತು.

Intro:ಮಂಗಳೂರು: ನಾಗಾರಾಧನೆಯ ಪ್ರಮುಖ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ಹಿನ್ನೆಲೆಯಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಾಗರ ಕಲ್ಲಿಗೆ ನಾಗತನು ಸೇವೆ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿರುವ ನಾಗರಕಲ್ಲಿಗೆ ಭಕ್ತರು ಹಾಲು ಮತ್ತು ಎಳನೀರಿನಿಂದ ಶ್ರದ್ಧಾಭಕ್ತಿ ಪೂರ್ವಕವಾಗಿ ಅಭಿಷೇಕ ನೆರವೇರಿಸಿ ನಾಗರಾಜನಿಗೆ ತನು ಎರೆದು ಕೃತಾರ್ಥರಾದರು.

ಈ ನಾಗತನುವಿನೊಂದಿಗೆ ವಿಶೇಷವಾಗಿ ಹಿಂಗಾರ, ಸಂಪಿಗೆ, ಕೇದಗೆ ಮೊದಲಾದ ಹೂಗಳನ್ನು ವಿಶೇಷವಾಗಿ ಸಮರ್ಪಿಸಿದರು.

Body:ಹೆಚ್ಚಿನ ಸಂಖ್ಯೆಯಲ್ಲಿ ಊರ ಮತ್ತು ಪರವೂರ ಭಕ್ತರು ಆಗಮಿಸಿ ಅಭಿಷೇಕದ ಹಾಲು ಮತ್ತು ಎಳನೀರು ಮಿಶ್ರಿತ ತೀರ್ಥ, ನಾಗನಿಗೆ ಪ್ರಿಯವಾದ ಅರಿಶಿನ ಪ್ರಸಾದ ಹಾಗೂ ಕಂಡಸಾರಿ ಕೆಂಪು ಕಲ್ಲು ಸಕ್ಕರೆ ಒಳಗೊಂಡ ಪಂಚಕಜ್ಜಾಯ ಸ್ವೀಕರಿಸಿ ‌ಕೃತಾರ್ಥರಾದರು.

ಭಕ್ತರು ಇಂದು ಬೆಳಗ್ಗಿನಿಂದಲೇ ತನುಸೇವೆ ಮಾಡಿ ಶ್ರೀ ದೇವರ ಸೇವೆಯನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಹೊರಾಂಗಣದಿಂದಲೇ ಸರತಿ ಸಾಲಿನ ಮೂಲಕ ಭಕ್ತರು ತೆರಳಿ ತನು ಸಮರ್ಪಿಸಿದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.