ಕಡಬ(ಮಂಗಳೂರು): ಮಂಗಳೂರಿನ ಕೆಎಂಎಫ್ ಡೈರಿಯ ಗುಣ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬದ ಸೌಮ್ಯ ಪ್ರಸಾದ್ರವರು ಮಂಗಳೂರು ವಿ.ವಿಯ ಪ್ರೊ. ಭೋಜಪೂಜಾರಿ ಅವರ ಮಾರ್ಗದರ್ಶನದಲ್ಲಿ ‘ಸಿಂಥೆಟಿಕ್ ಆ್ಯಂಡ್ ಬಯಾಲಾಜಿಕಲ್ ಸ್ಟಡೀಸ್ ಆನ್ ಸಮ್ ನೈಟ್ರೋಜನ್ ಹೆಟಿರೋಸೈಕ್ಲಿಕ್ ಕಂಪೌಂಡ್ಸ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ಕಡಬದ ಕೋಡಿಂಬಾಳದ ಪಡೆಜ್ಜಾರಿನ ಶಾಲಾ ನಿವೃತ್ತ ಶಿಕ್ಷಕ ವಸಂತ ಗೌಡ ಪಡೆಜ್ಜಾರು ಮತ್ತು ಲಲಿತಾ ದಂಪತಿಯ ಪುತ್ರಿಯಾಗಿರುವ ಸೌಮ್ಯ ರವರು ಮಂಗಳೂರಿನ ಮಾಲಾಡಿ ನಿವಾಸಿ ಸಿವಿಲ್ ಇಂಜಿನಿಯರ್ ಪ್ರಸಾದ್ ಕೆ.ಎನ್ ಕಡಬ ಅವರ ಪತ್ನಿ.