ETV Bharat / state

ನ್ಯೂಜಿಲ್ಯಾಂಡ್​​ನಲ್ಲಿ‌ ಮಂಗಳೂರು ಮೂಲದ ದಂಪತಿ ಹತ್ಯೆ.. ಮಗನಿಂದಲೇ ಕೊಲೆಯಾದ ಅಪ್ಪ - ಅಮ್ಮ! - ಮಂಗಳೂರು ಮೂಲಕ ದಂಪತಿ ನ್ಯೂಜಿಲ್ಯಾಂಡ್​​ನಲ್ಲಿ ಕೊಲೆ

ಮಂಗಳೂರು ಮೂಲದ ದಂಪತಿ, ದೂರದ ನ್ಯೂಜಿಲ್ಯಾಂಡ್​​ನಲ್ಲಿ ಭೀಕರವಾಗಿ ಹತ್ಯೆಯಾಗಿದ್ದಾರೆ. ಸ್ವಂತ ಮಗನೇ ತನ್ನ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ನ್ಯೂಜಿಲ್ಯಾಂಡ್​​ನಲ್ಲಿ‌ ಮಂಗಳೂರು ಮೂಲದ ದಂಪತಿ ಹತ್ಯೆ
Son murdered his parents in New Zealand
author img

By

Published : Apr 1, 2021, 12:59 PM IST

Updated : Apr 1, 2021, 3:34 PM IST

ಮಂಗಳೂರು: ಮಂಗಳೂರು ಮೂಲದ ದಂಪತಿಯು ದೂರದ ನ್ಯೂಜಿಲ್ಯಾಂಡ್​​ನಲ್ಲಿ ಭೀಕರವಾಗಿ ಹತ್ಯೆಗೊಳಗಾಗಿರುವ ಘಟನೆ ನಡೆದಿದೆ.

ನಗರದ ಬಲ್ಮಠ ನಿವಾಸಿಗಳಾಗಿರುವ ಎಲ್ಸಿ ಬಂಗೇರ ಮತ್ತು‌ ಹರ್ಮನ್ ಬಂಗೇರ ಹತ್ಯೆಗೀಡಾದವರು. ಅವರ ಪುತ್ರ ಶೀಲ್(23) ಹತ್ಯೆ ಮಾಡಿದವನೆಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಶೀಲ್ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರ ಇರಲು ಪ್ರಯತ್ನಿಸಿ, ತನ್ನಿಚ್ಛೆಯಂತೆ ಬದುಕಲು ಅಭಿಲಾಷೆ ಹೊಂದಿದ್ದನು. ಈ ಹಿನ್ನೆಲೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡುತ್ತಿದ್ದನು. ಕಳೆದ ಶುಕ್ರವಾರ ಕೂಡಾ ಇದೇ ಕಾರಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿ - ತಂದೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಹೆತ್ತವರು ಮೃತಪಟ್ಟ ಬಳಿಕ ಆತನೂ ಆತ್ಮಹತ್ಯೆ ಮಾಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ಇದೀಗ ನ್ಯೂಜಿಲ್ಯಾಂಡ್​​​ನ ಆಕ್ಲೆಂಡ್ ಆಸ್ಪತ್ರೆಯಲ್ಲಿ ಯುವಕ ಜೀವನ್ಮರಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಓದಿ: ಅನೈತಿಕ ಸಂಬಂಧಕ್ಕೆ ಇಬ್ಬರು ಮಕ್ಕಳನ್ನು ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

ಎಲ್ಸಿಯವರ ತಂದೆ ಎಡ್ವರ್ಡ್ ಅಮ್ಮನ್ನ ಬಲ್ಮಠದ ಶಾಂತಿ ಕೆಥೆಡ್ರೆಲ್​ನ ಸಂಡೇ ಸ್ಕೂಲ್​​​ನಲ್ಲಿ ಅಧ್ಯಾಪಕರಾಗಿದ್ದರು. ಮುಂಬೈಯಲ್ಲಿ ಗೋದ್ರೆಜ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎಲ್ಸಿಯವರು, ಮುಂಬೈನ ಶಾಲೆಯೊಂದರ ಆಡಳಿತಾಧಿಕಾರಿಯಾಗಿದ್ದ ಹರ್ಮನ್ ಬಂಗೇರ ಅವರನ್ನು ವಿವಾಹವಾಗಿದ್ದರು‌. ಆ ಬಳಿಕ‌ ದಂಪತಿ ಗೋವಾದಲ್ಲಿ ನೆಲೆಸಿದ್ದರು. 2007ರಲ್ಲಿ ಮಗನ ವಿದ್ಯಾಭ್ಯಾಸಕ್ಕಾಗಿ ನ್ಯೂಜಿಲ್ಯಾಂಡ್​ಗೆ ದಂಪತಿ ಸ್ಥಳಾಂತರಗೊಂಡಿದ್ದರು. ಇದೀಗ ದಂಪತಿ ತಮ್ಮದೇ ಮಗನಿಂದ ಹತ್ಯೆಗೊಳಗಾಗಿದ್ದಾರೆ.

Last Updated : Apr 1, 2021, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.