ಬಂಟ್ವಾಳ(ದಕ್ಷಿಣ ಕನ್ನಡ): ಕೋವಿಡ್ನಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದ ವೇಳೆ ಮಗನೂ ಸಹ ಕುಸಿದುಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಬೈಲುಗುತ್ತಿನಲ್ಲಿ ನಡೆದಿದೆ.
ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ನಿವೃತ್ತ ಕೆ.ಪಿ.ಟಿ ಪ್ರೊಫೆಸರ್ ಭುಜಂಗ ಶೆಟ್ಟಿ, ಕೋವಿಡ್ನಿಂದಾಗಿ ಮರಣ ಹೊಂದಿದ್ದರು. ತಂದೆಯ ಅಂತ್ಯಕ್ರಿಯೆ ಸಂದರ್ಭ ಮಗ ಶೈಲೇಶ್ ಕುಸಿದು ಬಿದ್ದ ಕಾರಣ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
![son-who-died-after-father-covid-death-funeral](https://etvbharatimages.akamaized.net/etvbharat/prod-images/kn-mng-bantwal-01-punacha-photo-kac10019_02062021153149_0206f_1622628109_1067.jpeg)
ಘಟನೆ ಹಿನ್ನೆಲೆ:
ಮಂಗಳವಾರ ಮೃತಪಟ್ಟಿದ್ದ ಭುಜಂಗ ಶೆಟ್ಟಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಪುಣಚದ ಅವರ ಮನೆಯಲ್ಲಿ ಬುಧವಾರ ಕೋವಿ ನಿಯಾಮಾವಳಿಯಂತೆ ನಡೆಸಲಾಗುತ್ತಿತ್ತು. ಈ ಸಂದರ್ಭ ಅವರ ಪುತ್ರ ಶೈಲೇಶ್ ಭಾಗಿಯಾಗಿದ್ದರು. ಈ ವೇಳೆ ಶೈಲೇಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅವರು ಮನೆಯತ್ತ ಹೋಗಿದ್ದು, ಮನೆಯ ಅಂಗಳ ತಲುಪುತ್ತಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗ್ತಿದೆ. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.