ETV Bharat / state

ಮಂಗಳೂರು ಮಹಿಳಾ ಪೊಲೀಸ್ ಠಾಣೆಯ PSI ಸೇರಿ ಆರು ಮಂದಿ ಸಿಬ್ಬಂದಿ ಅಮಾನತು! - ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌

ಪೋಕ್ಸೋ ಪ್ರಕರಣವೊಂದರಲ್ಲಿ ಸರಿಯಾಗಿ ತನಿಖೆ ಮಾಡದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪಿಎಸ್ಐ ಸೇರಿ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

Six women police suspended at mangalore
Six women police suspended at mangalore
author img

By

Published : Jan 5, 2022, 9:52 PM IST

ಮಂಗಳೂರು: ನಗರ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಸೇರಿ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಮಾಹಿತಿ ನೀಡಿದ್ದಾರೆ.

ಪೋಕ್ಸೋ ಪ್ರಕರಣವೊಂದರಲ್ಲಿ ಸರಿಯಾಗಿ ತನಿಖೆ ಮಾಡದೆ ನಿರ್ಲಕ್ಷ್ಯ ತೋರಿದ ಆರೋಪದಡಿ ಪಿಎಸ್ಐ ಓರ್ವರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಮಹಿಳಾ ಠಾಣಾ ಸಿಬ್ಬಂದಿ ಪೊಲೀಸ್ ಠಾಣೆಯೊಳಗೇ ಮದ್ಯದ ಪಾರ್ಟಿ ಮಾಡಿದ್ದಾರೆ ಎಂದು ಐವರನ್ನು ಅಮಾನತು ಮಾಡಲಾಗಿದೆ.

ಪಾರ್ಟಿ ಮಾಡಿರುವುದಕ್ಕೆ ಸಿಸಿಟಿವಿ ದಾಖಲೆಯಿದ್ದು, ಈ ಬಗ್ಗೆ ಸಿಸಿಪಿ, ಡಿಸಿಪಿ ತನಿಖೆ ನಡೆಸಿದ್ದಾರೆ. ಈ ಮೂಲಕ ಅವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಯ ಇಬ್ಬರು ಎಎಸ್ಐ, ಇಬ್ಬರು ಹೆಡ್ ಕಾನ್​​ಸ್ಟೇಬಲ್ ಹಾಗೂ ಓರ್ವ ಕಾನ್​​​ಸ್ಟೇಬಲ್ ಅಮಾನತು ಆಗಿದ್ದಾರೆ‌‌ ಎಂದು ಮಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.