ETV Bharat / state

ಬಂಧಿತರ ಬಿಡುಗಡೆಯಾಗದಿದ್ದರೆ ಎಸ್​ಪಿ ಕಚೇರಿಗೆ ಮುತ್ತಿಗೆ : ಎಸ್​ಡಿಪಿಐ ಮುಖಂಡರಿಂದ ಎಚ್ಚರಿಕೆ

ಪೊಲೀಸರು ತೋರಿಸುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೇಳುತ್ತಿದೆ. ಒರಿಜಿನಲ್ ವಿಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಇಲ್ಲ, ಅದರಲ್ಲಿ ಇರುವುದು ಎಸ್​ಡಿಪಿಐ ಜಿಂದಾಬಾದ್ ಎಂಬ ಘೋಷಣೆ ಮಾತ್ರ. ನೈಜ ವಿಡಿಯೋ ತಿರುಚಿ ಅಮಾಯಕರನ್ನು ಬಂಧಿಸಲಾಗಿದೆ..

SDPI leader
ಎಸ್​ಡಿಪಿಐ ಮುಖಂಡನ ಎಚ್ಚರಿಕೆ
author img

By

Published : Jan 1, 2021, 6:03 PM IST

ಮಂಗಳೂರು : ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಹಿನ್ನೆಲೆ ಬಂಧನವಾಗಿರುವ ಮೂವರು ಎಸ್​ಡಿಪಿಐ ಕಾರ್ಯಕರ್ತರನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡದಿದ್ದಲ್ಲಿ ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಸ್​ಡಿಐ ಮುಖಂಡ ರಿಯಾಜ್ ಪರಂಗಿಪೇಟೆ ಎಚ್ಚರಿಕೆ ನೀಡಿದ್ದಾರೆ.

ಎಸ್​ಡಿಪಿಐ ಮುಖಂಡನ ಎಚ್ಚರಿಕೆ

ನಗರದಲ್ಲಿ ಮಾತನಾಡಿದ ಅವರು, ಉಜಿರೆಯಲ್ಲಿ ವಿಜಯೋತ್ಸವದ ವೇಳೆ ಎಸ್​ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಪೊಲೀಸರು ತಿರುಚಿದ ವಿಡಿಯೋ ಆಧಾರವಾಗಿಟ್ಟುಕೊಂಡು ನಮ್ಮ ಮೂವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮೂರು ದಿನಗಳೊಳಗೆ ಅವರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು.

ಓದಿ:ಪಾಕ್ ಪರ ಘೋಷಣೆ ಪ್ರಕರಣ: ಮೂವರ ಬಂಧನ

ಪೊಲೀಸರು ತೋರಿಸುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೇಳುತ್ತಿದೆ. ಒರಿಜಿನಲ್ ವಿಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಇಲ್ಲ, ಅದರಲ್ಲಿ ಇರುವುದು ಎಸ್​ಡಿಪಿಐ ಜಿಂದಾಬಾದ್ ಎಂಬ ಘೋಷಣೆ ಮಾತ್ರ. ನೈಜ ವಿಡಿಯೋ ತಿರುಚಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಪರಂಗಿಪೇಟೆ ಅವರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.