ETV Bharat / state

ಮಂಗಳೂರು ದಸರಾದ ಅದ್ಧೂರಿ ಶೋಭಾಯಾತ್ರೆ: ನಾಳೆ ಬೆಳಗ್ಗೆ ಸಂಪನ್ನ

ಮಂಗಳೂರು ದಸರಾದ ಅದ್ಧೂರಿ ಶೋಭಾಯಾತ್ರೆ ಕುದ್ರೋಳಿ ಕ್ಷೇತ್ರದಿಂದ ಆರಂಭವಾಗಿದ್ದು, ಮಂಗಳೂರು ನಗರದಾದ್ಯಂತ ಸಂಚರಿಸಿ ನಾಳೆ ಬೆಳಗ್ಗೆ ಶೋಭಾಯಾತ್ರೆ ಸಂಪನ್ನಗೊಳ್ಳಲಿದೆ.

shobhayatra-of-mangalore-dasara
ಮಂಗಳೂರು ದಸರಾದ ಅದ್ಧೂರಿ ಶೋಭಾಯಾತ್ರೆ : ನಾಳೆ ಬೆಳಿಗ್ಗೆ ಸಂಪನ್ನ
author img

By

Published : Oct 5, 2022, 8:59 PM IST

ಮಂಗಳೂರು : ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ನಡೆದಿದ್ದ ಮಂಗಳೂರು ದಸರಾ ಶೋಭಾಯಾತ್ರೆ ಇಂದು ವೈಭವದಿಂದ ಆರಂಭವಾಗಿದೆ.

ಮಂಗಳೂರಿನಲ್ಲಿ ಈ ಬಾರಿ ವೈಭವದ ಶೋಭಾಯಾತ್ರೆ ಕಳೆಗಟ್ಟಿದ್ದು ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ ಕುದ್ರೋಳಿ ಕ್ಷೇತ್ರದಿಂದ ಆರಂಭವಾಗಿದೆ.

ಈ ಮೃಣ್ಮಯ ಮೂರ್ತಿಗಳನ್ನು ಮಂಗಳೂರು ನಗರದಾದ್ಯಂತ ಶೋಭಾಯಾತ್ರೆ ಮೂಲಕ ಕೊಂಡೊಯ್ದು ನಾಳೆ ಮುಂಜಾನೆ ವೇಳೆಗೆ ಮತ್ತೆ ಕುದ್ರೋಳಿ ಶ್ರೀಕ್ಷೇತ್ರದ ಪುಷ್ಕರಣಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ‌. ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಮೆರುಗು ನೀಡುತ್ತಿವೆ.

ಶೋಭಾಯಾತ್ರೆ ಸಾಗುವ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕೃತದಿಂದ ಕಂಗೊಳಿಸುತ್ತಿದೆ. ಈ ಶೋಭಾಯಾತ್ರೆಗೆ ಮಂಗಳೂರು ಮಾತ್ರವಲ್ಲದೇ, ಹೊರ ರಾಜ್ಯ, ಹೊರ ದೇಶಗಳಿಂದಲೂ ಜನರು ಆಗಮಿಸುತ್ತಾರೆ. ನಗರ ಪ್ರದಕ್ಷಿಣೆ ಮಾಡುವ ಶೋಭಾಯಾತ್ರೆ ನಾಳೆ ಬೆಳ್ಳಂಬೆಳಗ್ಗೆ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸಂಪನ್ನಗೊಳ್ಳಲಿದೆ.

ಇದನ್ನೂ ಓದಿ : ಹುಲಿವೇಷ ಕುಣಿತಕ್ಕೆ ಸ್ಟೆಪ್ ಹಾಕಿದ ಯುವತಿಯರು - ವಿಡಿಯೋ ವೈರಲ್ ಮಂಗಳೂರಿನಲ್ಲಿ ಹುಲಿ ನೃತ್ಯ ಮಾಡಿದ ಯುವತಿಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.